H D Kumarswamy: ಕಾಂಗ್ರೆಸ್ ಜೊತೆ ಸೇರಿ ಜೆಡಿಎಸ್ ನೆಲಕಚ್ಚಿದೆ: ಹೆಚ್ ಡಿ ಕುಮಾರಸ್ವಾಮಿ
ಮೈಸೂರು: ಕಾಂಗ್ರೆಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ಪರಿಣಾಮ ನಮ್ಮ ಪಕ್ಷ ನೆಲ ಕಚ್ಚುವಂತಾಗಿದೆ. ಇದರಲ್ಲೇನು ಎರಡು ಮಾತಿಲ್ಲ, ಪಕ್ಷವನ್ನ ನೆಲ ಕಚ್ಚಿಸಲು ಹೊರಟಿದ್ಧಾರೆ. ಜೆಡಿಎಸ್ನ ಮುಳುಗಿಸುತ್ತೇನೆ ಅಂತ ಹೊರಟವರ ಸ್ಥಿತಿ ಏನಾಗಿದೆ ಅಂತ ಇತಿಹಾಸ ಇದೆ ಎಂದು ಕಾಂಗ್ರೆಸ್ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲಾ ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ರು ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಾಲ ಮನ್ನಾ ಮಾಡಲು ಅವರೇನು ಸಹಕಾರ ಕೊಡಲಿಲ್ಲ. ನನಗೆ ಹಲವಾರು ಷರತ್ತುಗಳನ್ನ ವಿಧಿಸಿ ಬಜೆಟ್ಗೆ ಸಹಕಾರ ಕೊಡಲಿಲ್ಲ ಎಂದರು.
ಹಾನಗಲ್, ಸಿಂಧಗಿಯಲ್ಲಿ ಸಾಲಮನ್ನಾ ಯೋಜನೆಯನ್ನ ನೆನಪಿಸಿಕೊಳ್ತಾರೆ. ಬಿಜೆಪಿಯವರು ಸ್ವಚ್ಚ ಭಾರತ ಅಂತಾರೆ ಆದ್ರೆ ಉತ್ತರ ಕರ್ನಾಟಕದಲ್ಲಿ ಜನ ಚೊಂಬು ಹಿಡಿದು ಬಹಿರ್ದೆಸೆಗೆ ಹೋಗೋದು ತಪ್ಪಿಲ್ಲ ಎಂದು ಬಿಜೆಪಿಯನ್ನ ಟೀಕಿಸಿದರು. ಜೆಡಿಎಸ್ನಲ್ಲಿ ದೊಡ್ಡ ಮಟ್ಟದ ಲೀಡ್ಗಳಿಲ್ಲ, ಕಾರ್ಯಕರ್ತರೇ ನಮಗೆ ಲೀಡರ್ಗಳು ಎಂದು ಹೇಳಿದರು.
90 ವರ್ಷದ ದೇವೆಗೌಡರು, ನಾನು ಇಬ್ಬರೇ ಹೋರಾಟ ಮಾಡುತ್ತಿದ್ದೇವೆ. ನಾಳೆ ಮತ್ತೆ ಎರಡು ದಿನಗಳ ಕಾಲ ಸಿಂಧಗಿ, ಹಾನಗಲ್ ಉಪ ಚುನಾವಣಾ ಪ್ರಚಾರಕ್ಕೆ ಹೋಗ್ತೀನಿ.
ಬಿಜೆಪಿಯ ಬಿ ಟೀಂ ಅಂತ ಜೆಡಿಎಸ್ ವಿರುದ್ದ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಜೆಡಿಎಸ್ ಮುಳುಗೇ ಹೋಯ್ತು ಅಂತ ಹೇಳ್ತಾರೆ. ಹಿಂದಿನ ಬೆಳವಣಿಗೆಯನ್ನ ನೋಡಿದ್ರೆ ಜೆಡಿಎಸ್ ಎಂತೆಂತಹ ಸವಾಲುಗಳನ್ನ ಎದುರಿಸಿದೆ ಎಂದರು.
ಕುಮಾರಸ್ವಾಮಿ ಸೂಟ್ ಕೇಸ್ ತೆಗೆದುಕೊಂಡು ಉಪಚುನಾವಣೆಗೆ ಅಭ್ಯರ್ಥಿ ಹಾಕಿದ್ದಾರೆಂದು ಜಮೀರ್ ಆರೋಪಕ್ಕೆ ಪ್ರತಿಕ್ರಿಯಿಸಿ ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತೆ ಎಂದು ಶಾಸಕ ಜಮೀರ್ ಗೆ ತಿರುಗೇಟು ನೀಡಿದರು. ಹಿಂದೆ ನಾನು ಹಿಂದೆ ಬಿಬಿಎಂಪಿ ನಾಲ್ಕು ವಾರ್ಡ್ಗಳಲ್ಲಿ ಟ್ರಾಕ್ಟರ್ ಮೂಲಕ ಕಸ ಸಂಗ್ರಹಿಸುವ ಗುತ್ತಿಗೆ ಪಡೆದು ವ್ಯಾಸಂಗ ಮಾಡುತ್ತಿದ್ದೆ. ಅಂದಿನ ವಿಪಕ್ಷ ನಾಯಕ ನಾಗೇಗೌಡರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ರು. ನಮ್ಮ ತಂದೆ ಕೂಡಲೇ ಬೈದು ಕಸ ಸಂಗ್ರಹ ಗುತ್ತಿಗೆ ಮಾಡದಂತೆ ಹೇಳಿದ್ರು ಬಳಿಕ ಮೈಸೂರಿಗೆ ಬಂದು ಚಿತ್ರವಿತರಕನಾಗಿ ಕೆಲಸ ಆರಂಭಿಸಿದೆ ಎಂದು ತಿಳಿಸಿದರು.
ಅಂದು ನಾನು ಹಣ ಗಳಿಸಬಹುದಾಗಿದ್ರೆ ಎಷ್ಟು ಗಳಿಸಬಹುದಿತ್ತು. ಉತ್ತರ ಕೊಡಲು ಅವರು ಅನ್ಫಿಟ್. ಆನೆ ಹೋಗುತ್ತಿದ್ರೆ ನಾಯಿ ಬೊಗಳುತ್ತವೆ ಅವರಿಗೆಲ್ಲಾ ತಲೆ ಕೆಡಿಸಿಕೊಳ್ಳೋಕೆ ಆಗುತ್ತಾ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಸಂಪೂರ್ಣ ಗಮನ ಉಪಚುನಾವಣೆ ಮೇಲಿದೆ. ಎಲ್ಲರೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇನ್ನೊಂದೆಡೆ ರಾಜ್ಯದ ಹಲವರು ಪ್ರದೇಶದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ವಿಧಾನಸೌಧದ ಕಚೇರಿ ಬಾಗಿಲು ಮುಚ್ಚಿದ್ದಾರೆ ಎಂದರು. ಒಂದೊಂದು ಭೂತಿಗೆ ಸಚಿವರನ್ನು ನೇಮಕ ಮಾಡಿದ್ದಾರೆ. ವಿರೋಧ ಪಕ್ಷದವರು ಅದೇ ರೀತಿ ಮಾಡಿದ್ದಾರೆ ಆದರೆ ನಮ್ಮಲ್ಲಿ ದೊಡ್ಡ ನಾಯಕರಿಲ್ಲ. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಆದ್ರೆ ಅದನ್ನೆ ಸರ್ಕಾರ ಮರೆತಿದೆ. ಜನರ ಸಂಕಷ್ಟಕ್ಕಿಂತ ಚುನಾವಣೆ ಗೆಲುವನ್ನೆ ಪ್ರತಿಷ್ಠೆಯಾಗಿದ್ದಾರೆ. ಎರಡು ಪಕ್ಷದವರು ಹಣ ಚೆಲ್ಲುತ್ತಿದ್ದಾರೆ ಅಂತ ಅವರೆ ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪಕ್ಷ ಬಿಟ್ಟು ಹೋಗುವವರನ್ನ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಉಳಿದುಕೊಳ್ಳುತ್ತೇನೆ ಅನ್ನೋರನ್ನ ಹೋಗು ಅಂದ್ರೆ ಹುಚ್ಚಿಡಿದಿದೆ ಅಂತಾರೆ. ಆದ್ರೆ ಹೋಗೋರನ್ನ ಹಿಡಿದುಕೊಳ್ಳಲು ಆಗುತ್ತಾ ಗುಬ್ಬಿ ಶಾಸಕರು ಕುಮಾರಸ್ವಾಮಿ ಇಮೇಜ್ ಹಾಳಾಗಿದೆ ಅಂತಾರೆ. ಇಮೆಜ್ ಇಲ್ಲದವನಿಂದ ಏನ್ ಅನುಕೂಲ. ಇಮೇಜ್ ಇರೋರ್ ಹತ್ತಿರ ಹೋಗುತ್ತಾರೆ ಬಿಡಿ. ಪಕ್ಷ ಬಿಟ್ಟು ಹೋಗುತ್ತೇನೆ ಅನ್ನೋರ ಬಗ್ಗೆ ನಾನು ಮಾತನಾಡಲ್ಲ ಎಂದು ತಿಳಿಸಿದರು.
ಅಸಮಧಾನಿತರನ್ನ ಆದಷ್ಟು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಜೆಡಿಎಸ್ ಸಂಘಟನಾ ಕಾರ್ಯಾಗಾರದ ಮುನ್ನ ನಾನೇ ಎಸ್.ಆರ್.ಶ್ರೀನಿವಾಸ್ಗೆ ಕಾಲ್ ಮಾಡಿ ಆಹ್ವಾನ ಮಾಡಿದೆ. ಮದ್ಯಾಹ್ನದ ಬಳಿಕ ಬಂದು ದೇವೆಗೌಡರ ಜೊತೆ ಫೋಟೋ ತೆಗೆಸಿಕೊಂಡ್ರು. ಫೋಟೋ ತೆಗೆಸಿಕೊಂಡು ನಾನು ಜೆಡಿಎಸ್ನಲ್ಲೇ ಇದ್ದೇನೆ ಅಂತ ಕಾರ್ಯಕರ್ತರಿಗೆ ಹೇಳೋದು.
ಆದ್ರೆ ಸಂಪರ್ಕ ಮಾತ್ರ ಕಾಂಗ್ರೆಸ್ ನಾಯಕರ ಜೊತೆ ಬೆಳೆಸೋದು ಎಂದು ಎಸ್.ಆರ್.ಶ್ರೀನಿವಾಸ್ ವಿರುದ್ದ ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಶಾಸಕ ಜಿಟಿಡಿ ಉಳಿಸಿಕೊಳ್ಳುವ ಬಗ್ಗೆಯೂ ಕೂಡ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. ಅಂತಹ ಸಂದರ್ಭ ಬಂದಾಗ ನಾನು ಹೇಳುತ್ತೇನೆ. ಒಂದೊಂದ್ ಸಲ ಮಕ್ಕಳ ಮಾತನ್ನು ಕೇಳಬೇಕಲ್ವಾ, ನಿಖಿಲ್ , ಹರೀಶ್ಗೌಡ ಇಬ್ಬರೂ ಸ್ನೇಹಿತರು ಅವರ ಸ್ನೇಹದಲ್ಲಿ ಏನಾದರೂ ಆದರೆ ಏನಾಗುತ್ತೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.