Latest

ಗೋಕಾಕ್ ಫಾಲ್ಸ್ ನಲ್ಲಿ ಜಾರಿಬಿದ್ದಿದ್ದ ಯುವಕನ ರಕ್ಷಣೆ

ಬೆಳಗಾವಿ: ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ಜಾರಿಬಿದ್ದಿದ್ದ ಯುವಕನ ರಕ್ಷಣೆ ಮಾಡಲಾಗಿದೆ. ಫಾಲ್ಸ್​​ನಲ್ಲಿ 140 ಅಡಿ ಆಳಕ್ಕೆ ಬಿದ್ದ ಯುವಕನೊಬ್ಬ ಬದುಕುಳಿದಿದ್ದು ಪವಾಡವೇ ಎಂದು ಬಣ್ಣಿಸಲಾಗುತ್ತಿದೆ, ಕಾರ್ಯಾಚರಣೆ ನಡೆಸಿರುವ ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಜನರು ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಕಳೆದ ದಿನ ಸಂಜೆ 7 ಗಂಟೆ ಸುಮಾರಿ ಪ್ರದೀಪ್ ಸೆಲ್ಫೀ ತೆಗೆಯಲು ಹೋಗಿ ಗೋಕಾಕ್ ಫಾಲ್ಸ್ ನಲ್ಲಿ ಜಾರಿ ಬಿದ್ದಿದ್ದ,ರಾತ್ರಿಹೊತ್ತು ಅಗ್ನಿ ಶಾಮಕದಳದ ಸಿಬ್ಬಂಧಿ ಮತ್ತು ಪೋಲೀಸರು ಯುವಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರೂ ಯುವಕ ಪತ್ತೆ ಆಗಿರಲಿಲ್ಲ, ಮದ್ಯರಾತ್ರಿ 3 ಗಂಟೆಗೆ ಈ ಯುವಕ ಪೋಲೀಸರಿಗೆ ಫೋನ್ ಮಾಡಿ ನಾನು ಕಲ್ಲಿನ ಪೊದರಿನಲ್ಲಿ ಇದ್ದೇನೆ ನನ್ನನ್ನು ರಕ್ಷಿಸಿ ಎಂದು ಅಂಗಲಾಚಿದ್ದ , ನಂತರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಪ್ರದೀಪ್ ನನ್ನು ಹೊರತಗೆಯುವಲ್ಲಿ ಯಶಸ್ವಿಯಾಗಿದ್ದಾರೆ

140 ಅಡಿ ಆಳದ ಕಂದಕಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಪ್ರದೀಪ್, ಪೋನ್ ರಿಂಗ್ ಆಗ್ತಿದ್ರೂ ಸಹ ಫೋನ್ ರಿಸಿವ್ ಮಾಡಿರಲಿಲ್ಲ, ಇಡೀ ರಾತ್ರಿ ಕಂದಕದಲ್ಲೆ ಕಳೆದಿದ್ದ ಪ್ರದೀಪ್ ಸಾಗರ್​​ಗೆ, ಬೆಳಗ್ಗೆ 4 ಗಂಟೆಗೆ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿ ತಾನು ಬದುಕಿರುವ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡದಿಂದ ಪ್ರದೀಪ ರಕ್ಷಣೆ ಮಾಡಲಾಗಿದೆ‌. ಪ್ರದೀಪನನ್ನು ರಕ್ಷಿಸಿ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ಕೊಡಿಸಲಾಗಿದೆ

Related Articles

Leave a Reply

Your email address will not be published.

Back to top button