Latestಸಿನಿಮಾ

ರಷ್ಯಾ; ಬಾಹ್ಯಾಕಾಶದಲ್ಲಿ ನಡೆದ ಪ್ರಥಮ ಸಿನಿಮಾ ಚಿತ್ರೀಕರಣ

ಮಾಸ್ಕೋ: ರಷ್ಯಾದ ಚಿತ್ರ ತಂಡವೊಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ಸಿನಿಮಾ ಚಿತ್ರೀಕರಣ ನಡೆಸಿದ್ದು, 12 ದಿನಗಳ ಚಿತ್ರೀಕರಣ ಮುಗಿಸಿರುವ ತಂಡ ಅ.17ರಂದು ಭೂಮಿಗೆ ವಾಪಾಸಾಗಿದೆ ಎಂದು ರಶ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಮೊಸ್ ತಿಳಿಸಿದೆ.

ಸಿನಿಮಾ ನಿರ್ದೇಶಕ ಕ್ಲಿಮ್ ಶಿಪೆಂಕೊ, ನಟಿ ಯೂಲಿಯಾ ಪೆರೆಸಿಲ್ಡ್ ಹಾಗೂ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ ಒಲೆಗ್ ನೊವಿಟಿಸ್ಕಿ ಅವರಿದ್ದ ಸೋಯುರ್ ಎಂ ಎಸ್ 18 ಕ್ಷ ನೌಕೆ ಪಶ್ಚಿಮ ಕಝಕಿಸ್ತಾನದ ಬಳಿ ಲ್ಯಾಂಡ್ ಆಗಿದೆ. ಭಾರೀ ಗಾತ್ರದ ಪ್ಯಾರಾಶೂಟ್ ಗಳ ನೆರವಿನಿಂದ ಅತಂರಿಕ್ಷ ನೌಕೆಯನ್ನು ಲ್ಯಾಂಡ್ ಆಗಲು ಸಹಕರಿಸಿದ ದೃಶ್ಯಗಳು ರಷ್ಯಾದ ಸರ್ಕಾರಿ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ.

ನಟಿ ಪೆರೆಸಿಲ್ಡ್ ಈ ಬಗ್ಗೆ ಪ್ರತಿಕ್ರಿಯಿಸಿ, ಬಾಹ್ಯಾಕಾಶಕ್ಕೆ 12 ದಿನಗಳ ಚಿತ್ರೀಕರಣಕ್ಕೆ ತೆರಳುವಾಗ ಮೊದಲು ಭಯವಾಗಿತ್ತು. ಆದರೆ ಅಲ್ಲಿ ಹೋದ ಮೇಲೆ ದಿನಗಳು ಕಳೆದದ್ದೇ ತಿಳಿಯಲಿಲ್ಲ. ಕೊನೆಗೆ ಅಲ್ಲಿಂದ ಭೂಮಿಗೆ ಹಿಂತಿರುಗುವ ಮನಸೂ ಬರಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button