ಆರ್ಎಸ್ಎಸ್ ಬಗ್ಗೆ ಯಾರು ಏನು ಹೇಳಿದ್ರು ತಲೆ ಕೆಡಿಸಿಕೊಳ್ಳುವುದಿಲ್ಲ: ಸಚಿವ ಬಿ ಸಿ ನಾಗೇಶ್
ಕಲಬುರಗಿ: ಆರ್ ಎಸ್ ಎಸ್ 1925 ರಲ್ಲಿ ಆರಂಭವಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಟೀಕೆ ಮಧ್ಯೆಯೆ ಬೆಳೆದುಕೊಂಡು ಬಂದಿದೆ ಯಾರೋ ಏನು ಮಾತನಾಡಿದರು ಆರ್ ಎಸ್ ಎಸ್ ಆಗಲಿ ನಾವಾಗಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವ. ಬಿ ಸಿ ನಾಗೇಶ್ ಹೇಳಿದ್ದಾರೆ.
ಕಲಬುರಗಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಟೀಕೆ ವಿಚಾರ ಕಾಂಗ್ರೇಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಗಾಂಧಿ ಹತ್ಯೆಗೂ ಆರ್ ಎಸ್ ಎಸ್ ಗೂ ಸಂಬಂಧವಿಲ್ಲ ಎಂದು ಸುಪ್ರಿಂ ಕೋರ್ಟ್ , ಮತ್ತು ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ ಮೇಲು ಇವತ್ತಿಗೂ ಕಾಂಗ್ರೆಸ್ ಕಮೆಂಟ್ ಮಾಡ್ತಿದ್ದಾರೆ. ವೈಚಾರಿಕವಾಗಿ ವಿಚಾರದ ಆಧಾರದ ಮೇಲೆ ರಾಜಕೀಯ ಮಾಡಬೇಡಿ. ಯಾವುದೋ ಒಂದು ಧರ್ಮವನ್ನ ಅವಹೇಳನ ಮಾಡಕೋ ಏನ್ ಬೇಕಾದ್ರು ಕಾಂಗ್ರೆಸ್ ನವರು ಹೇಳ್ತಿದ್ದಾರೆ. ಸಂಘ ಬೆಳೆದಿರೋದೆ ವಿರೋಧ ಮದ್ಯೆ ಪ್ರಪಂಚದಲ್ಲಿ ಭಾರತಕ್ಕೆ ಯಾವ ಬೇಲೆಯಿತ್ತೋ ಆ ಬೇಲೆಯನ್ನ ಮತ್ತೊಮ್ಮೆ ತಂದು ಕೋಡೊಕೆ ಮುಂದಾಗಿದೆ. ವಿತ್ ಯೂ, ವಿತ್ ಔಟ್ ಯೂ , ಅಗೆನೆಸ್ಟ್ ಯೂ ಎಂದು ಸಂಘ ಸ್ಪಷ್ಟವಾಗಿ ಹೇಳಿದೆ ಎಂದ ಅವರು, ದೇಶಕ್ಕಾಗಿ ಮಾಡುತ್ತಿರುವ ಮಾಡ್ತಿರುವ ಕೆಲಸ ಮುಂದುರೆಯುತ್ತದೆ. ಇದೆಲ್ಲದ್ರ ವಿರೋಧ ಬಗ್ಗೆ ಆರ್ ಎಸ್ ಎಸ್ ತೆಲೆ ಕೆಡಿಸಿಕೊಳ್ಳಲ್ಲ ನಾವು ತೆಲೆ ಕೆಡಿಸಿಕೊಳ್ಳಲ್ಲ ಎಂದು ತೀರುಗೇಟು ನೀಡಿದ್ದಾರೆ.
ಹಾನಗಲ್, ಸಿಂದಗಿ ಉತ್ತಮ ರೆಸ್ಪಾನ್ಸ್ ಇದೆ.
ಇದೆ ವೇಳೆ ಮಾತನಾಡಿದ ಅವರು, ಹಾನಗಲ್ ಸಿಂದಗಿ ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲಲ್ಲಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಏನೆನು ಮಾಡಿದ್ದಾರೆಂಬುದು ಪ್ರಪಂಚಕ್ಕೆ ಗೋತ್ತಿದೆ. ಈ ಬಗ್ಗೆ ಸಾರ್ವಜನಿಕರು ಉತ್ತರ ಸಹ ಕೊಟ್ಟಿದ್ದಾರೆ. ಎಂದಿದ್ದಾರೆ.
ಧರ್ಮದ ಹಾಗೂ ಜಾತಿ ಆಧಾರದ ಮೇಲೆ ನಾವು ಶಿಕ್ಷಣ ನೀಡುತ್ತಿಲ್ಲ:
ಸಿದ್ದರಾಮಯ್ಯ ನೀಡುವ ವಿದ್ಯಾಶ್ರೀ ಯೋಜನೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ನಾಗೇಶ್, ವಿದ್ಯಾಸಿರಿ ಯೋಜನೆ ನಾವು ನಿಲ್ಲಿಸಿಲ್ಲ, ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿತ್ತು. ಸಿದ್ದರಾಮಯ್ಯನವರು ಮಾಡಿದ್ದ ಒಳ್ಳೆ ಕೆಲಸಗಳು ಮುಂದುವರಿಸ್ತಿವಿ. ಹಾಗೇ ಅವರು ಮಾಡಿರುವ ಕೆಲ ಕೆಟ್ಟ ಕೆಲಸಗಳನ್ನ ಸಹ ಕೈಬಿಡುತ್ತೇವೆ ಎಂದು ಸ್ಪಷ್ಟತೆ ನೀಡಿದರು.