Latestಅಂಕಣಗಳು

ಹೊಟ್ಟೆ ತುಂಬಿದ ನಮ್ಮ ಕ್ರಿಕೆಟ್ ಹುಡುಗರು: ಹಸಿವಿನ ಪಾಕ್ ಆಟಗಾರರು; ಭಾರತ ಪಾಕ್ ಕ್ರಿಕೆಟ್ ಕಲಿಸಿದ ಪಾಠ

ಎರಡು ದಿನಗಳ ಹಿಂದಿನ ಮಾತು. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋತಿತು. ಪಾಕಿಸ್ತಾನ ಅದ್ಭುತವಾಗಿ ಆಟ ಆಡಿ ವಿಜಯಿಯಾಯಿತು. ಕ್ರೀಡೆ ಎಂದರೆ ಹಾಗೆ. ಚೆನ್ನಾಗಿ ಆಡಿದವರು ಗೆಲ್ಲುತ್ತಾರೆ, ಚೆನ್ನಾಗಿ ಆಡದಿದ್ದರೆ ಸೋಲುತ್ತಾರೆ.. ಈ ಪಂದ್ಯದಲ್ಲಿ ಆದದ್ದು ಅದೇ, ಭಾರತದ ಈ ಸೋಲಿನಿಂದ ಭಾರತೀಯರಿಗೆ ನೋವಾಗಿದ್ದರೆ ಅದು ಸಹಜ, ನಮ್ಮ ತಂಡ ಗೆಲ್ಲಬೇಕು ಎಂದು ಬಯಸುವುದು ಅಸಹಜವೇನಲ್ಲ.. ಜೊತೆಗೆ ಭಾರತದ ಉಪಖಂಡದಲ್ಲಿ ಕ್ರಿಕೆಟ್ ಎನ್ನುವುದು ದೇಶ ಪ್ರೇಮದ ಸಂಕೇತ ಕೂಡ ಆಗಿರುವುದು ನಿಜ. ಹಾಗೆ ಇದೊಂದು ರಿಲಿಜನ್. ಹಾಗೆ ಕ್ರಿಕೆಟ್ ನಂತಹ ಆಟ ದೇಶಪ್ರೇಮದ ಸಂಕೇತವಾಗಿದೆ. ನಮ್ಮ ದೇಶದ ತಂಡವನ್ನು ಬೆಂಬಲಿಸುವುದು ಧರ್ಮ, ಬೆಂಬಲಿಸದಿದ್ದರೆ ಅದು ದೇಶದ್ರೋಹ,, ನಿಜವಾದ ಕ್ರೀಡೆಯನ್ನು ಅಸ್ವಾದಸಲು ಸಾಧ್ಯವಾಗದ ಸ್ಥಿತಿ.

ಇವತ್ತಿನ ದಿನ ದೇಶಪ್ರೇಮ ಎಂಬುದು ಹೆಚ್ಚು ಚಾಲ್ತಿಯಲ್ಲಿ ಇರುವ ಶಬ್ದ. ಪ್ರಭುತ್ವದ ವಿರುದ್ಧ ಮಾತನಾಡುವುದು ದೇಶದ್ರೋಹ. ಸಂಘ ಪರಿವಾರದ ಕಾರ್ಯಚಟುವಟಿಕೆಯನ್ನು ಪ್ರಶ್ನಿಸುವುದು ದೇಶದ್ರೋಹ. ಹಿಂದೂ ಹಿಂಸೆಯನ್ನು ಪ್ರಶ್ನಿಸುವುದು ದೇಶದ್ರೋಹ, ಅಲ್ಪಸಂಖ್ಯಾತರ ಮೇಲೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವುದು ದೇಶದ್ರೋಹ. ಇಂತಹ ದೇಶಪ್ರೇಮೆದ ಹೊಸ ವ್ಯಾಖ್ಯಾನದ ಮತ್ತು ದೇಶಪ್ರೇಮವನ್ನು ಕೋಮಿನ ಜೊತೆ ಜೋಡಿಸುವ ಕಾಲ ಘಟ್ಟ ಇದು. ಇಂತಹ ಸ್ಥಿತಿ ಈ ದೇಶದಲ್ಲಿ ಹಿಂದೆಂದೂ ಬಂದಿರಲಿಲ್ಲ.

ಈಗ ಮೊದಲು ಪ್ರಸ್ತಾಪಿಸಿದ ವಿಷಯಕ್ಕೆ ಬರುತ್ತೇನೆ. ಅದು ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ಮತ್ತು ಈ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದ್ದು,. ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆದಿರಲಿಲ್ಲ. ಅದೂ ಸಹ ದೇಶಪ್ರೇಮಕ್ಕೆ ಸಂಬಂಧಿಸಿಯೇ ತೆಗೆದುಕೊಂಡ ತೀರ್ಮಾನ, ಭಾರತದಲ್ಲಿ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ನಿಲ್ಲಿಸದಿರುವ ವರೆಗೆ ಆ ದೇಶದ ಜೊತೆ ಕ್ರಿಕೆಟ್ ಆಡಬಾರದು ಎಂಬ ನಿರ್ಧಾರ, ಹಾಗೆ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಲ್ಲು ಆಡುವ ಅವಕಾಶವನ್ನು ಪಾಕಿಸ್ತಾನದ ಆಟಗಾರರಿಗೆ ನೀಡದಿರುವುದೂ ಕೂಡ ದೇಶಪ್ರೇಮದ ಹೊಸ ನರೇಟೀವ್ ದ ಭಾಗವೇ ಆಗಿತ್ತು, ಇದೇ ನೆರೇಟೀವ್ ನಿಂದಾಗಿಯೇ ಪಾಕಿಸ್ತಾನದ ಕ್ರಿಕೆಟ್ ವೀಕ್ಷಕ ವಿವರಣೆಕಾರರನ್ನು ಹೊರಹಾಕಲಾಗಿತ್ತು,, ಯಾವ ಕಾರಣಕ್ಕೂ ಪಾಕಿಸ್ಥಾನದ ಗಾಳಿ ಇಲ್ಲಿ ಬೀಸಕೂಡದು, ಹೀಗಾಗಿ ಪಾಕಿಸ್ಥಾನದ ಆಟಗಾರರು ಹೇಗಿದ್ದಾರೆ ಎಂಬ ಅರಿವು ನಮ್ಮ ತಂಡಕ್ಕೆ ಇರಲಿಲ್ಲ. ನಿಜ ಪಾಕಿಸ್ಥಾನದ ಆಟಗಾರರು ಹೇಗೆ ಆಡುತ್ತಾರೆ ಎಂಬುದನ್ನು ವೀಡಿಯೋ ಮೂಲಕ ನೋಡಿದ್ದರೂ ಅವರು ಜೊತೆ ಆಡದಿರುವುದು ಅವರ ಆಟವನ್ನು ನಿಜವಾಗಿ ತಿಳಿಯದಂತೆ ಮಾಡಿತ್ತು. ಆದರೂ ನಮ್ಮ ಹುಡುಗರಲ್ಲಿ ಹುಮ್ಮಸು ಇತ್ತು.. ಪಾಕಿಸ್ಥಾನ ನಮಗೆ ಯಾವ ಲೆಕ್ಕ ಎಂದು ನಮ್ಮವರು ಅಂದುಕೊಂಡಿದ್ದರು, ಐಪಿಎಲ್ ಮತ್ತ್ತು ಕ್ರಿಕೆಟ್ ನೀಡಿದ ಕೋಟ್ಯಾಂತರ ರೂಪಾಯಿ ಹಣ ನಮ್ಮ ಆಟಗಾರರಿಗೆ ಈ ವಿಶ್ವಾಸವನ್ನು ತುಂಬಿತ್ತು.

ಬದುಕಿನ ಯಾವುದೇ ಕ್ಷೇತ್ರದಲ್ಲಿ ಅಹಂಕಾರವನ್ನೇ ವಿಶ್ವಾಸ ಎಂದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.. ಅವರು ವಿಶ್ವಾಸ ಎಂದುಕೊಂಡಿದ್ದು ವಿಶ್ವಾಸ ಆಗಿರಲಿಲ್ಲ. ಅದು ಅಹಂಕಾರವಾಗಿತ್ತು.
ಎರಡೂ ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ಆಡಲು ಮೈದಾನಕ್ಕೆ ಇಳಿದ ನಮ್ಮ ಹುಡುಗರು ಇದನ್ನು ನಿರೀಕ್ಷಿಸಿರಲಿಲ್ಲ. ಪಾಕಿಸ್ತಾನ ಟಾಸ್ ಗೆದ್ದು ಭಾರತದ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದಾಗಲೇ ಎಚ್ಚರಿಕೆಯ ಗಂಟೆ ಬಡಿಯತೊಡಗಿತ್ತು,, ಭಾರತದ ಆರಂಭಿಕ ಆಟಗಾರರಾದ ಶರ್ಮಾ, ರಾಹುಲ್ ಜೋಡಿಗೆ ಎದುರಾದವರು ಅಫ್ರೀದಿ ಎಂಬ ತೋಫಾನಿನಂತ ಬೌಲರ್,, ಅವನು ಎಸೆದ ಬೌಲುಗಳಿಗೆ ಇವರು ನಿರುತ್ತರರಾದರು. ಮುಂದಿನದನ್ನು ಹೇಳಬೇಕಾಗಿಲ್ಲ. ಅದು ಭಾರತದ ಪತನ..

ಮುಂದೆ ಎನಾಯಿತು ಎಂಬುದನ್ನು ವಿವರಿಸಬೇಕಾದ ಅಗತ್ಯ ಇಲ್ಲ. ಭಾರತ ಪಾಕಿಸ್ತಾನದ ಎದುರು ತಲೆ ತಗ್ಗಿಸಿ ನಿಲ್ಲಬೇಕಾಯಿತು.. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮೆಂಟರ್ ಮಹೇಂದ್ರ ಸಿಂಗ್ ದೋನಿ ಕ್ರಿಡೆಯ ಗೌರವವನ್ನು ಎತ್ತಿ ಹಿಡಿದರು.. ಪಾಕಿಸ್ತಾನದ ಆಟಗಾರರ ಮೈದಡವಿದರು,, ಆ ಹುಡುಗರಿಗೆ ದೋನಿಯ ಜೊತೆ ಮಾತನಾಡುವುದೇ ದೌಡ್ಡ ಗೌರವ ಅನ್ನಿಸಿದಂತಿತ್ತು,,

ಇಲ್ಲಿ ಗೆದ್ದಿದ್ದು ಕ್ರಿಕೆಟ್ ಎಂಬ ಅದ್ಭುತ ಕ್ರೀಡೆ. ಗೆಲ್ಲಿಸಿದವರು ವಿರಾಟ್ ಮತ್ತು ದೋನಿ..ವಿರಾಟ್ ಎದುರು ವಿದ್ಯಾರ್ಥಿಗಳಂತೆ ನಿಂತ ಪಾಕ್ ಆಟಗಾರರು, ಅವರತ್ತ ಪ್ರೀತಿಯ ನೋಟ ಬೀರಿದ ಕೋಹ್ಲಿ.. ಈ ಚಿತ್ರವನ್ನು ಮರೆಯುವುದು ಸಾಧ್ಯವೇ ಅಲ್ಲ..ಇದು ಕ್ರಿಕೆಟ್ ಎಂಬ ಕ್ರೀಡೆ ಇರುವವರೆಗೆ ನೆನಪಿನಲ್ಲಿ ಉಳಿಯುವ ಚಿತ್ರ ಆದರೆ ಕ್ರೀಡಾ ಮನೋಭಾವನೆ ಎಂದರೇನು ಎಂದು ಅರಿಯದ ಕೆಲವು ವಾಹಿನಿಗಳು ಮತ್ತು ಮುಬ್ಬಕ್ತರು ಭಾರತದ ಸೋಲಿಗಾಗಿ ಅರಚಾಟ ಪ್ರಾರಂಭಿಸಿದರು. ಭಾರತ ಗೆದ್ದಿದ್ದರೆ ಅ ಗೆಲುವಿಗಾಗಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಗೌರವ ಸಲ್ಲಿಸಬೇಕು ಎಂದುಕೊಂಡವರಿಗೆ ನಿರಾಸೆಯಾಗಿತ್ತು,, ಆಗ ಈ ಜನ ಟಾರ್ಗೆಟ್ ಮಾಡಿದ್ದು ಭಾರತದ ಬೌಲರ್ ಮಹಮ್ಮದ್ ಶಮಿ ಅವರನ್ನು, ಅದೂ ಅವರು ಮುಸ್ಲಿಂ ಎಂಬ ಕಾರಣಕ್ಕೆ . ಆದರೆ ಭಾರತದ ಆರೋಗ್ಯಪೂರ್ಣ ಮನಸ್ಸುಗಳು ಶಮಿ ಅವರ ಬೆಂಬಲಕ್ಕೆ ನಿಂತವು, ಸಚಿನ್ ತೆಂಡೂಲ್ಕರ್ ಅವರಿಂದ ರಾಹುಲ್ ಗಾಂಧಿ ಅವರ ವರೆಗೆ ಎಲ್ಲರೂ ಶಮಿಗೆ ಬೆಂಬಲ ಸೂಚಿದರು, ಆದ್ರೆ ಈ ಕೋಮುವಾದಿ ಕ್ರಿಮಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವಿಷ ಕಾರುವುದನ್ನು ನಿಲ್ಲಿಸಲಿಲ್ಲ.

ಈ ಸ್ಥಿತಿಯಲ್ಲಿ ಪಾಕಿಸ್ತಾನದ ಒಪನರ್ ರಿಜ್ವಾನ್ ಅವರು ಶಮಿ ಅವರಿಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿದರು.. ಶಮಿ ವಿಶ್ವದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರು ಎಂದೂ ಶ್ಲಾಘಿಸಿದರು.ಪಾಕಿಸ್ಥಾನದ ಮೂರ್ಖ ಗೃಹ ಸಚಿವ ಪಾಕಿಸ್ತಾನದ ವಿಜಯ ಇಸ್ಲಾಂ ಜಯ ಎಂದು ಹೇಳಿಕೆ ನೀಡಿ ಎಲ್ಲರಿಂದಲೂ ಉಗಿಸಿಕೊಂಡರು,. ಪಾಕಿಸ್ಥಾನದ ಮಾಧ್ಯಮಗಳು ಗೃಹ ಸಚಿವರಿಗೆ ಉಗಿದವು,, ಹಾಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ದೋನಿ ಅವರನ್ನು ಇಡೀ ಪಾಕಿಸ್ಥಾನ ದ ಮಾಧ್ಯಮ ಕೊಂಡಾಡಿತು.

ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್ ಭಾರತದ ಕ್ರೀಡಾ ಮನೋಭಾವನೆ ನಮಗೆಲ್ಲ ಆದರ್ಶ ಎಂದರು.. ಮುಂಬರುವ ದಿನಗಳಲ್ಲಿ ಈ ಕ್ರೀಡಾ ಮನೋಭಾವನೆಯಿಂದಲೇ ಭಾರತ ಮತ್ತೆ ಪುಟಿದೇಳುತ್ತದೆ ಎಂದರು. ಭಾರತ ತಂಡವನ್ನು ಮನಸಾರೆ ಶ್ಲಾಘಿಸಿದರು,, ನಮ್ಮಲ್ಲಿ ಯಾರದರೂ ಪಾಕಿಸ್ಥಾನ ತಂಡವನ್ನು ಶ್ಲಾಘಿಸುವ ಸ್ಥಿತಿ ಇದೆಯೆ ? ಯೋಚಿಸಿ. ಒಂದೊಮ್ಮೆ ಶ್ಲಾಘಿಸಿದರೆ ಅವರಿಗೆ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಅಟ್ಟುವುದು ಗ್ಯಾರಂಟಿ,,

ನನಗೆ ಅನ್ನಿಸುವ ಹಾಗೆ ಪಾಕಿಸ್ತಾನದ ಆಟಗಾರರು ಅದ್ಬುತವಾಗಿ ಕ್ರಿಕೆಟ್ ಆಡಬಲ್ಲರು. ನಿನ್ನೆ ನ್ಯೂಜಿಲೆಂಡ್ ತಂಡವನ್ನು ಅವರು ಬಗ್ಗು ಬಡಿದರು,, ಇದು ಅವರ ಸತತ ಎರಡನೆಯ ಜಯ. ಗೆಲುವಿನ ಲಯ ತಮಗೆ ದಕ್ಕಿದೆ ಎಂಬುದನ್ನು ತೋರಿಸಿಕೊಟ್ಟ ಪಂದ್ಯ ಅದಾಗಿತ್ತು.

ಭಾರತ ಪಾಕಿಸ್ತಾನದ ಜೊತೆ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬಾರದಿತ್ತು. ಹಾಗೆ ಐ ಪಿ ಎಲ್ ಪಂದ್ಯಗಳಲ್ಲೂ ಅವರಿಗೆ ಅವಕಾಶ ನೀಡಬೇಕಿತ್ತು. ಹಾಗೆ ಮಾಡಿದ್ದರೆ ಪಾಕಿಸ್ತಾನದ ಆಟಗಾರರ ಗುಣ ದೌರ್ಬಲ್ಯಗಳು ನಮಗೆ ತಿಳಿಯುತ್ತಿದ್ದವು,, ಹಾಗಾಗಿದ್ದರೆ ವಿಶ್ವದ ಮಹತ್ವದ ಟೂರ್ನಿಗಳಲ್ಲಿ ಪಾಕಿಸ್ತಾನವನ್ನ್ಯು ಸೋಲಿಸುವುದು ನಮಗೆ ಸುಲಭವಾಗುತ್ತಿತ್ತು.

ಈಗ ವಿಶ್ವ ಕ್ರಿಕೆಟ್ ಅನ್ನು ಭಾರತ ಹಣ ಬಲದಿಂದ ಆಳುತ್ತಿದೆ, ಆದರೆ ಪಂದ್ಯದ ಗೆಲುವಿಗೆ ಹಣ ಬಲ ಮಾತ್ರ ಸಾಲದು. ಗೆಲ್ಲಲು ಛಲ ಬೇಕು,, ಈ ಛಲ ಕೂಡ ಹಣದಿಂದ ಮಾತ್ರ ಬರುವುದಿಲ್ಲ. ಹಸಿವು ಗೆಲ್ಲುವ ಛಲ ನೀಡುತ್ತದೆ, ಭಾರತದ ಆಟಗಾರರು ಹೊಟ್ಟೆತುಂಬಿದವರು. ಹೀಗಾಗಿ ಗೆಲ್ಲುವ ಛಲ ಕಡಿಮೆ ಆಗಿದೆ.. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಆಟಗಾರರು ಬಡತನದಲ್ಲಿದ್ದಾರೆ. ಅದೇ ಅವರಿಗೆ ಗೆಲ್ಲುವ ಛಲವನ್ನು ನೀಡಿದೆ. ಗೆಲ್ಲಿವ ಚಾಕಚಕ್ಯತೆಯನ್ನು ಕಲಿಸಿದೆ,, ಹಸಿವು ಕಲಿಸುವ ಪಾಠ ಗೆಲುವಿನದ್ದೇ ಆಗಿರುತ್ತದೆ. ಹೊಟ್ಟೆ ತುಂಬಿದ ಭಾರತದ ಕ್ರಿಕೆಟ್ ಮಂಡಳಿ ಈ ಬಗ್ಗೆ ಯೋಚಿಸಲಿ..ನಮ್ಮ ಆಟಗಾರರು ಈ ಸೋಲಿನಿಂದ ಪಾಠ ಕಲಿಯಲಿ.

ಶಶಿಧರ್ ಭಟ್

ಪ್ರಧಾನ ಸಂಪಾದಕರು, ಬಾಲಾಜಿ ಮಿಡಿಯಾ ಗ್ರೂಪ್​​​​

Related Articles

Leave a Reply

Your email address will not be published.

Back to top button