ಜ್ವರದಿಂದ ಒಂದೆ ಗ್ರಾಮದ ಮೂವರು ಬಾಲಕಿಯರ ಸಾವು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕಿಡಿ
ಕಲಬುರಗಿ: ಕೊರೊನಾ ಅಟ್ಟಹಾಸ ಕಡಿಮೆ ಆಗಿದೆ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಜ್ವರದಿಂದ ಬಳಲಿ ಒಂದೆ ಗ್ರಾಮದ ಮೂವರು ಬಾಲಕಿಯರು ಸಾವನ್ನಪ್ಪಿರುವದು ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ.
ಅಫಜಲಪುರ ತಾಲ್ಲೂಕಿನ ಆನೂರ ಗ್ರಾಮದಲ್ಲಿ 15 ದಿನಗಳ ಅಂತರದಲ್ಲಿ ಮೂರು ಜನ ಬಾಲಕಿಯರ ಸಾವನ್ನಪ್ಪಿದ್ದಾರೆ. ಮೂವರು ಬಾಲಕಿಯರು ಜ್ವರದಿಂದ ಬಳಲಿ ಸಾವನ್ನಪ್ಪಿರುವದು ಗಮನಾರ್ಹ ವಿಷಯವಾಗಿದೆ. ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆನೂರ ಗ್ರಾಮದ ಹಲವು ಬಾಲಕ ಬಾಲಕಿಯರು ಜ್ವರದಿಂದ ಬಳಲುತ್ತಿದ್ದು, ಮೂರು ಜನ ಬಾಲಕಿಯರು ಸಾವಿನಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮೇಲ್ನೋಟಕ್ಕೆ ಕಲುಷಿತ ಕುಡಿಯುವ ನೀರು ಸೇವನೆ ಮಾಡಿ ಅನಾರೋಗ್ಯಕ್ಕೆ ಒಳಗಾದಂತೆ ಕಂಡುಬರುತ್ತಿದೆ.
ಆನೂರು ಗ್ರಾಮಕ್ಕೆ ಕಲುಷಿತ ಕುಡಿಯುವ ನೀರು ಪುರೈಕಯಿಂದಲೆ ಮಕ್ಕಳ ಸಾವನ್ನಪ್ಪಿದ್ದಾರೆ. ಮೂರು ಜನ ಮಕ್ಕಳು ಸಾವನ್ನಪ್ಪಿದ್ರು ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ ಅಂತ ಗ್ರಾಮಸ್ಥರು ತಾಲೂಕಾಢಳಿತ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ತಾಲೂಕಾಡಳಿತ ಹಾಗೂ ಜಿಲ್ಲಾಢಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ.