Latest
Double Murder: ಮೈಸೂರಿನಲ್ಲಿ ಮಗನಿಂದಲೇ ತಂದೆ ಮತ್ತು ಮಹಿಳೆಯ ಬರ್ಬರ ಹತ್ಯೆ
ಮೈಸೂರು : ಮಗನೇ ತನ್ನ ತಂದೆ ಹಾಗೂ ಆತನ ಜೊತೆಗಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಹೊರ ವಲಯದಲ್ಲಿರುವ ಶ್ರೀನಗರದಲ್ಲಿ ಈ ಘಟನೆ ನಡೆದಿದ್ದು, ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾಗಿದ್ದಾರೆ. ನಗರದ ಕೆ.ಜಿ.ಕೊಪ್ಪಲು ನಿವಾಸಿ ಶಿವಪ್ರಕಾಶ್, ಶ್ರೀನಗರದ ನಿವಾಸಿ ಲತಾ ಎಂಬುವರ ಮನೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಲತಾ ಮನೆಗೆ ನುಗ್ಗಿದ ಸಾಗರ್, ಮೊದಲು ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಲತಾಳ ಮೇಲೂ ಕೂಡ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಅವರ ಮಗ ನಾಗಾರ್ಜುನನ ಮೇಲೆ ಸಾಗರ್ ಹಲ್ಲೆ ನಡೆಸಿದ್ದಾನೆ.
ಗಾಯಾಳು ನಾಗಾರ್ಜುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಕೊಲೆಗೆ ಈವರೆಗೂ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲಾ. ಘಟನೆ ಸಂಭಂದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.