Latest

ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆಯ ಕುರಿತು ಚಿಂತನೆ ನಡೆಸಲಾಗುತ್ತಿದೆ: ಶಾಸಕ ಅರವಿಂದ ಬೆಲ್ಲದ

ಧಾರವಾಡ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿರುವುದು ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ಇದೆ. ಬೆಲೆ ಇಳಿಕೆ ಕುರಿತು ಈಗ ಯಾವೆಲ್ಲ ಹೆಜ್ಜೆ ಇಡಬೇಕು, ಆ ಎಲ್ಲ ಹೆಜ್ಜೆಯನ್ನು ಕೇಂದ್ರ ಸರ್ಕಾರ ಕೂಡಾ ಇಡಲು‌ ಮುಂದಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಇಳಿಸಲು ಈಗಾಗಲೇ ಚಿಂತನೆ ನಡೆಸಲಾಗುತ್ತಿದೆ. ಬರುವತಂಹ ದಿನಗಳಲ್ಲಿ ಬೆಲೆ ಇಳಿಕೆಯಾಗುವ ಭರವಸೆ ಇದೆ ಎಂದು ಶಾಸಕ ಅರವಿಂದ ಬೆಲ್ಲದ ವಿಶ್ವಾಸ ವ್ಯಕ್ತಪಡಿಸಿದರು. ‌

ಹುಬ್ಬಳ್ಳಿಯಲ್ಲಿ ಮಾಹಾನಗರ ಪಾಲಿಕೆಯ ವತಿಯಿಂದ ಶ್ರೀ ಸಿದ್ದಾರೂಢ ಆವರಣದಲ್ಲಿ ಹಮ್ಮಿಕೊಂಡಿದ್ದ 66 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಶ್ರೀ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ರಾಜ್ಯಗಳಲ್ಲಿಯು ಪೆಟ್ರೋಲ್ ಡಿಸೇಲ್ ಮೇಲೆ ಟ್ಯಾಕ್ಸ್ ಹಾಕಲಾಗುತ್ತಿದೆ, ಆದರೆ ನಮ್ಮ ರಾಜ್ಯದಲ್ಲಿ ಕಡಿಮೆ ಟ್ಯಾಕ್ಸ್‌ನ್ನು ಹಾಕಲಾಗುತ್ತಿದೆ. ರಾಜ್ಯ ಸರ್ಕಾರದ ಟ್ಯಾಕ್ಸ್ ಒಂದರಿಂದಲ್ಲೇ ಬೆಲೆ ಏರಿಕೆ ಆಗಿದೆ ಅನ್ನುವುದು ಸರಿಯಲ್ಲ. ಈ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿಂತನೆ ನಡೆಸುತ್ತಿವೆ.‌ ಬೆಲೆ ಏರಿಕೆಯ ಬಗ್ಗೆ ಮುಖ್ಯಂಮತ್ರಿಗಳ ಗಮನಕ್ಕೂ ಇದೆ, ಈಗ ರಾಜ್ಯ ಕೇಂದ್ರ ಸರ್ಕಾರಗಳು ಕೂಡಿಕೊಂಡು ಬೆಲೆ ಇಳಿಸುವ ಕಡೆ ಗಮನ ಹರುಸುತ್ತಿವೆ ಎಂದರು.‌

ಹು-ಧಾ ಪಾಲಿಕೆ ಮೇಯರ್‌ ಚುನಾವಣೆ 15 ರಿಂದ 20 ದಿನಗಳಲ್ಲಿ ನಡೆಯುತ್ತದೆ:

ರಾಜ್ಯದಲ್ಲಿನ ಎರಡು ಕ್ಷೇತ್ರಗಳ ಉಪ ಹಿನ್ನೆಲೆಯಲ್ಲಿ ಅವಳಿ ನಗರ ಮಾಹಾನಗರ ಪಾಲಿಕೆಯ ಮೇಯರ್ ಚುನಾವಣೆ ಕೊಂಚ ಮುಂದಕ್ಕೆ ಹೋಗುತ್ತಾ ಬಂದಿತ್ತು. ಈಗ ಎರಡು ಕ್ಷೇತ್ರಗಳ ಉಪ ಚುನಾವಣೆ ಮುಗಿದಿವೆ. ಹಾಗಾಗಿ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಪಾಲಿಕೆ ಮೇಯರ್ ಚುನಾವಣೆಯು ನಡೆಯುತ್ತದೆ. ಇದರ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಾಗಿದೆ. ಬರುವ ಹದಿನೈದು ದಿನಗಳಲ್ಲಿ ಮೇಯರ್ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಈಗಾಗಲೇ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚು ಸ್ಥಾನ ಪಡೆದುಕೊಳ್ಳುವುದರ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸಹಜವಾಗಿ ಮೇಯರ್ ಸ್ಥಾನಕ್ಕೆ ಪೈಪೋಟಿ ಇದೇ ಇರುತ್ತೆ. ಯಾರನ್ನು ಮೇಯರ್ ಮಾಡಬೇಕು ಎನ್ನುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮೇಯರ್ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ‌

Related Articles

Leave a Reply

Your email address will not be published.

Back to top button