Latest

ಬೆಳಕಿನ ಹಬ್ಬಕ್ಕೆ ಪರಿಸರ ಸ್ನೇಹಿ ಹಣತೆ: ಮಾಧವ ಗೋಶಾಲೆಯಲ್ಲಿ ಹಲವು ಉಪಯುಕ್ತ ಕಾರ್ಯ

ವರದಿ: ವೀರೇಶ ಚಿನಗುಡಿ

ಕಲಬುರಗಿ: ಬೆಳಕಿನ ಹಬ್ಬ ದೀಪಾವಳಿಗೆ ಮೇರಗು ಸಿಗುವುದು ಪಟಾಕಿ ಮತ್ತು ಹಣತೆಗಳಿಂದ ಆದರೆ ಪ್ಲಾಸ್ಟಿಕ್ ಹಣತೆಗೆ ಜನ‌ಮೊರೆ ಹೊಗುತ್ತಿರುವದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ‌. ಇದನ್ನು ತಪ್ಪಿಸಲು ಇಲ್ಲೊಂದು ಗೋಶಾಲೆ ವಿನೂತನ ಪ್ರಯತ್ನಕ್ಕೆ ಕೈಹಾಕಿ ಪರಿಸರ ರಕ್ಷಣೆ ಜೊತೆಗೆ ಮಹಿಳೆಯರಿಗೆ ಉದ್ಯೋಗ ನೀಡಿ ಆಸರೆಯಾಗುತ್ತಿದೆ.

ಗೋವುಗಳ ಸಗಣಿಯಿಂದ ಪರಿಸರ ಸ್ನೇಹಿ ದೀಪಗಳ ತಯಾರಿಕೆಯಲ್ಲಿ ತೊಡಗಿದ ಮಹಿಳೆಯರು.. ಮತ್ತೊಂದಡೆ ಪ್ಲ್ಯಾಸ್ಟಿಕ್ ಹಣತೆಗಿಂತ ಸುಂದರವಾಗಿ ಕಾಣುತ್ತಿರುವ ಪರಿಸರ ಸ್ನೇಹಿ ಹಣತೆಗಳು.. ಇನ್ನೊಂದಡೆ ಮಗುವಿನಂತೆ ಜಾನುವಾರುಗಳನ್ನು ಪೊಷಿಸುತ್ತಿರುವ ಗೋಶಾಲೆ ಒಡೆಯ…ಇಂತಹ ದೃಶ್ಯ ಕಂಡುಬಂದಿದ್ದು ಕಲಬುರಗಿ ಹೊರವಲಯದ ಕುಸನೂರು ಶ್ರೀಮಾಧವ ಗೋಶಾಲೆಯಲ್ಲಿ… ಗೋವುಗಳ ಸಗಣಿ ಮತ್ತು ಗಂಜಲುದಿಂದ ವಿಭೂತಿ, ಆಯುರ್ವೇದಿಕ ಔಷಧಿಯಂತ ಅನೇಕ ಉಪಯುಕ್ತ ವಸ್ತುಗಳನ್ನು ತಯಾರು ಮಾಡುವ ಈ ಗೋ ಶಾಲೆಯಲ್ಲಿ ಈಗ ದೀಪ ಹಚ್ಚಲು ಹಣತೆ ತಯಾರಿಕೆ ಮಾಡಲಾಗುತ್ತಿದೆ. ಸಗಣಿ ಬಳಸಿಕೊಂಡು ಬಗೆಬಗೆಯ ವರ್ಣಗಳಲ್ಲಿ ಹಣತೆ ತಯಾರಿಸಿ ಜನರಿಗೆ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಹತ್ತಾರು ಮಹಿಳೆಯರಿಗೆ ಹಣತೆ ತಯಾರಿಸುವ ತರಬೇತಿ ನೀಡಲಾಗಿದ್ದು, ಸಗಣಿ ಸೇರಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿಯೇ ಕುಳಿತು ಹಣತೆ ತಯಾರಿಸಿ ಸಂಪಾಧನೆ ಮಾಡುತ್ತಿದ್ದಾರೆ. ಗೋಶಾಲೆಯ ಮಾಧರಿ ಕಾರ್ಯದಿಂದ ಜನರಿಗೆ ಕಡಿಮೆ ಬೆಲೆಯಲ್ಲಿ ಪರಿಸರ ಸ್ನೇಹಿ ಹಣತೆ ದೋರೆತರೆ ಇನ್ನೊಂದಡೆ ಮಹಿಳೆಯರಿಗೆ ಉದ್ಯೋಗ ಸಿಕ್ಕಂತಾಗಿದೆ.

ಗೋಶಾಲೆಯ ಹೊಣೆ ಹೊತ್ತಿರುವ ಮಹೇಶ ಬೀದರ್‌ಕರ್, ವೃತಿಯಲ್ಲಿ ಕಾಲೇಜು ಉಪನ್ಯಾಸಕರಾಗಿದ್ದಾರೆ. ಜಾನುವಾರುಗಳ ಮೇಲಿನ ಪ್ರೀತಿಗೆ ಗೋಶಾಲೆ ಆರಂಭಿಸಿದ್ದಾರೆ. ನೂರಾರು ಜಾನುವಾರುಗಳು ಸದ್ಯ ಗೋಶಾಲೆಯಲ್ಲಿವೆ ಆದ್ರೆ ಇವ್ಯಾವು ಖರೀದಿಸಿ ತಂದಿರುವದಲ್ಲ.. ದೈಹಿಕ ಅಂಗಾಗ ವೈಕಲ್ಯ, ವೃದ್ಯಾಪ ವಯಸ್ಸಿನ ಜಾನುವಾರು, ಅನಾರೋಗ್ಯ ಪೀಡಿತ ಜಾನುವಾರು ಹೀಗೆ ರೈತರಿಗೆ ಉಪಯೋಗಕ್ಕೆ ಬಾರದೆ ಹೊರೆಯಾಗುವ ಜಾನುವಾರುಗಳನ್ನು ತಂದು ಮಹೇಶ ಪೊಷಣೆ ಮಾಡುತ್ತಾರೆ. ಅಗತ್ಯ ಚಿಕಿತ್ಸೆ ಕೊಡಿಸಿ ರಕ್ಷಣೆ ಮಾಡುತ್ತಿದ್ದಾರೆ. ಚೇತರಿಸಿಕೊಂಡ ಜಾನುವಾರುಗಳನ್ನು ಬಡ ರೈತರಿಗೆ ಕೊಡುತ್ತಾರೆ. ಅಲ್ಲದೆ ಜಾನುವಾರುಗಳ ಸಗಣಿಯಿಂದ ಹಲವು ಪರಿಸರ ಸ್ನೇಹಿ, ಜನರ ಆರೋಗ್ಯ ರಕ್ಷಣೆ ವಸ್ತುಗಳು ತಯಾರಾಗುತ್ತಿವೆ. ಸಗಣಿಯಿಂದ ವಿಭೂತಿ, ಪಾಂಚಜನ್ಯಗಳು, ಗಣೇಶ ಮೂರ್ತಿ, ಗಿಫ್ಟ್ ಐಟಂ ಸೇರಿದಂತೆ ಹಲವು ದಿನಬಳಕೆ ವಸ್ತುಗಳು ಸಹ ಸಿದ್ದಪಡಿಸಲಾಗುತ್ತಿದೆ. ಇದರಿಂದಾಗಿ ಹಲವರಿಗೆ ಉದ್ಯೋಗ ಕೂಡಾ ಸಿಕ್ಕಿದೆ.

ಒಟ್ಟಿನಲ್ಲಿ ಮಾಧವ ಗೋಶಾಲೆ ಕೇವಲ ಗೋ ರಕ್ಷಣೆಗೆ ಮಾತ್ರ ಸೀಮಿತವಾಗಿರದೆ. ಹಲವು ಬಗೆಯ ವಸ್ತುಗಳನ್ನು ತಯಾರಿಸಿ ಪರಿಸರಕ್ಕೆ ಮತ್ತು ಮಾನವ ಸಂಕೂಲಕ್ಕೆ ಕೊಡುಗೆ ನೀಡುತ್ತಿದೆ. ಹತ್ತಾರು ಕೈಗಳಿಗೆ ಉದ್ಯೋಗ ಸಹ ಕೊಡುವ ಮೂಲಕ ಹಲವು ಕುಟುಂಬಗಳಿಗೆ ಆಧಾರಸ್ಥಂಬವಾಗಿ ನಿಂತಿದೆ. ಈಗ ಪರಿಸರ ಸ್ನೇಹಿ ಹಣತೆ ನೀಡುವಲ್ಲಿಯೂ ಮುಂದೆಬಂದಿದ್ದು ನಿಜಕ್ಕೂ ಗ್ರೇಟ್…

Related Articles

Leave a Reply

Your email address will not be published. Required fields are marked *

Back to top button