Latest

ಕಾರವಾರ ಪೆಟ್ರೋಲ್ ಬಂಕ್ ನಲ್ಲಿ ಪತ್ತೆ ಶವ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಳದಿಪುರ ಪೆಟ್ರೋಲ್ ಬಂಕ್ ನಲ್ಲಿ ಇಂದು ಮುಂಜಾನೆ ಶವವೊಂದು ಪತ್ತೆಯಾಗಿದೆ.

ಪತ್ತೆಯಾದ ಶವವು ಮಹರಾಷ್ಟ್ರ ಮೂಲದ್ದು ಎಂದು ಹೇಳಲಾಗುತ್ತಿದೆ. ಈತ ಮೃತನಾಗಿರುವ ಸ್ಥಳದಲ್ಲಿ ಆಸ್ಪತ್ರೆಯ ಚೀಟಿ, ಇತರೆ ದಾಖಲೆಗಳು ದೊರೆತಿದೆ. ಕೈ ಭಾಗದಲ್ಲಿ ಇಂಜೆಕ್ಷನ್ ಚುಚ್ಚಿರುವ ಗುರುತುಗಳಿದ್ದು, ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೋ ? ಅಥವಾ ಅನಾರೋಗ್ಯದಿಂದ ಮೃತನಾಗಿದ್ದಾನೆಯೋ ? ಎಂಬ ಕುರಿತು ಮಾಹಿತಿ ಹೊರಬರಬೇಕಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published.

Back to top button