Latest
ಮೈಸೂರು ದಸರಾ ಮಹೋತ್ಸವ 2021: ರಾಜಮನೆತನದ ಎಲ್ಲಾ ವಿಧಿ ವಿಧಾನಗಳು ಅಂತ್ಯ
ಮೈಸೂರು: ಮೈಸೂರು ದಸರಾ ಮಹೋತ್ಸವ 2021ರ ಹಿನ್ನೆಲೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ಅಂತ್ಯಗೊಂಡಿದೆ. ಈ ಮೂಲಕ ರಾಜಮನೆತನದಿಂದ ಅರಮನೆಯಲ್ಲಿ ನಡೆದ ಖಾಸಗಿ ದರ್ಬಾರಿನ ಎಲ್ಲಾ ವಿಧಿವಿಧಾನಗಳು ಅಂತ್ಯಗೊಂಡಿವೆ.
ಈಗ ಎಲ್ಲರ ಚಿತ್ತ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯತ್ತ ನೆಟ್ಟಿದ್ದು, ಇಂದು ಸಂಜೆ ನಡೆಯುವ ಜಂಬೂಸವಾರಿ ನಡೆಯಲಿದೆ. ಜಂಬೂಸವಾರಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆಯತ್ತ ಹೊರಟ ಚಾಮುಂಡೇಶ್ವರಿ ಉತ್ಸವ ಮೂರ್ತಿ ಹೊರಟಿದ್ದು, 11 ಗಂಟೆ ಸುಮಾರಿಗೆ ಮೈಸೂರು ಅರಮನೆ ತಲುಪಲಿದೆ.
ಮಧ್ಯಾಹ್ನ 2:30ಕ್ಕೆ ಚಿನ್ನದ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಿದ್ದು, ಕ್ಯಾಪ್ಟನ್ ಅಭಿಮನ್ಯು ಸತತ ಎರಡನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಅಭಿಮನ್ಯುವಿನ ಎಡಬಲದಲ್ಲಿ ಕಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರಾ ಆನೆಗಳು ಸಾಗಲಿವೆ.