Latest

ದಾಂಡಿಯಾ ರಾಸ್ ನಲ್ಲಿ ಶಾಮನೂರು ಶಿವಶಂಕರಪ್ಪ ಕೋಲಾಟ… ಮಹಿಳೆಯರ ಡ್ಯಾನ್ಸ್ ಸೂಪರ್…!

ದಾವಣಗೆರೆ: ಎಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ‌ ಮನೆ ಮಾಡಿದೆ. ಜೊತೆಗೆ ದಸರಾ ಹಬ್ಬದ ಸಡಗರವೂ ಕಳೆಗಟ್ಟಿದೆ. ರಾಜಸ್ತಾನ, ಗುಜರಾತ್ ಹಾಗೂ ಪಶ್ಚಿಮ ಬಂಗಾಳದವರು ರಾಜ್ಯದೆಲ್ಲೆಡೆ ಇದ್ದಾರೆ. ಈ ಹಬ್ಬದ ವೇಳೆ ದಾಂಡಿಯಾ ನೃತ್ಯ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ದಾವಣಗೆರೆಯಲ್ಲಿಯೂ ದಾಂಡಿಯಾ ಸಂಭ್ರಮ‌ ಮನೆ ಮಾಡಿದೆ.

ನಗರದ ಐಎಎಂ ಹಾಲ್‌ನಲ್ಲಿ ರಿದ್ದಿ-ಸಿದ್ದಿ ಫೌಂಡೇಶನ್ ಏರ್ಪಡಿಸಿದ್ದ ಭಾರತೀಯ ಸಂಸ್ಕೃತಿ ಸಾರುವ ‘ದಾಂಡಿಯಾ ರಾಸ್’ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರ ಜೊತೆ ಕೋಲಾಟ ಆಡುವ ಮೂಲಕ ಸಂಭ್ರಮಿಸಿದರು.

ಕೈ ತುಂಬ ಬಳೆ, ಸಾಂಪ್ರದಾಯಿಕ ಉಡುಗೆ, ಝರಿ ರುಮಾಲುಗಳಲ್ಲಿ ಸಿಂಗರಿಸಿಕೊಂಡ ಯುವತಿಯರು, ಡಿಜೆ ಒಳಗೆ ಬರುವ ಗುಜರಾತಿ ಹಾಡಿನ ಸದ್ದಿಗೆ ಕೈಯಲ್ಲಿ ಕೋಲು ಹಿಡಿದು ಹೆಜ್ಜೆ ಹಾಕಿದರೆ, ನೋಡುಗರಿಗೆ ಖುಷಿ ಕೊಟ್ಟಿತು.

ಡೋಲು ಬಾಜೆ..ಢಂ..ಢಂ ಡೋಲು ಹಾಡಿಗೆ ಯುವತಿಯರು ಹುಚ್ಚೆದ್ದು ಕುಣಿದರು.ಇವರ ನೃತ್ಯಕ್ಕೆ ಫೋಕಸ್ ಲೈಟಿಂಗ್‌ಗಳು ಇನ್ನು ಹೆಚ್ಚಿನ ಮೆರಗು ನೀಡಿದವು..

ನವರಾತ್ರಿ ನಿಮಿತ್ತ ದಾಂಡಿಯಾ ರಾಸ್ ಏರ್ಪಡಿಸಲಾಗಿದ್ದು, ನಗರದ ಪ್ರಸಿದ್ಧ ನೃತ್ಯ ತಂಡಗಳು ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿದವು. ದಾಂಡಿಯಾದ ಜೊತೆಗೆ ಕರ್ನಾಟಕದ ಜಾನಪದ ನೃತ್ಯ ಕೋಲಾಟದ ಪ್ರದರ್ಶನವೂ ಇಲ್ಲಿ ನಡೆಯಿತು.

ಮಹಿಳೆಯರು, ಪುರುಷರು ಗುಜರಾತಿನ ಸಾಂಪ್ರದಾಯಿಕ ಉಡುಗೆ ತೊಟ್ಟು, ನೂರಾರು ಮಂದಿ ವೃತ್ತಾಕಾರದಲ್ಲಿ ಹೆಜ್ಜೆ ಹಾಕುವುದನ್ನು ನೋಡಲು ಯುವ ಸಮೂಹವೇ ಅಲ್ಲಿ ನೆರೆದಿತ್ತು. ದಾಂಡಿಯಾ ನೃತ್ಯದಲ್ಲಿ ಕೋಲುಗಳೇ ಪ್ರಧಾನವಾಗಿದ್ದು, ದುರ್ಗ ಮತ್ತು ಮಹಿಷಾಸುರನ ನಡುವೆ ಯುದ್ದದ ಚಿತ್ರಣವು ನೃತ್ಯದ ಮೂಲಕ ಕಂಡು ಬಂತು. ಯುವತಿಯರ ಜತೆ ತಾಯಿಂದಿರು ಕೂಡ ದಾಂಡಿಯಾಕ್ಕೆ ಹೆಜ್ಜೆ ಹಾಕಿದರು. ವಯಸ್ಸಿನ ಭೇದವಿಲ್ಲದೇ ಹಿರಿಯರು, ಮಕ್ಕಳು ಗುಂಪು ಕಟ್ಟಿಕೊಂಡು ಹಾಡಿಗೆ ನೃತ್ಯ ಮಾಡುವುದನ್ನು ಹಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು.

Related Articles

Leave a Reply

Your email address will not be published.

Back to top button