ಕಲಬುರ್ಗಿಯಲ್ಲಿ ಮತ್ತೊಂದು ಕೊಲೆ: ತಂಗಿಯನ್ನು ಪ್ರೀತಿಸುತ್ತಿದ್ದ ಸ್ನೇಹಿತನ ಕೊಲೆ
ಕಲಬುರ್ಗಿ: ನಿನ್ನೆಯಷ್ಟೆ ಮನೆಗೆ ನುಗ್ಗಿ ಪುಡಾರಿ ಗ್ಯಾಂಗ್ ಯುವಕನ ಕೊಲೆ ಮಾಡಿದ ಪ್ರಕರಣ ಮಾಸುವ ಮುನ್ನವೆ ಇಂದು ಮತ್ತೊರ್ವ ಯುವಕನ ಕೊಲೆ ನಡೆದಿದೆ. ಕಲಬುರ್ಗಿ ಹೊರವಲಯದ ಕಾಳನೂರ್ ಧಾಬಾ ಬಳಿ 21 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಇಲ್ಲಿನ ಫಿಲ್ಟರ್ ಬೆಡ್ ನಿವಾಸಿ ಆಕಾಶ್ 21 ಕೊಲೆಯಾದ ಯುವಕ. ಆಕಾಶ್ ಓಂ ನಗರ ದಲ್ಲಿ ಗ್ಯಾರೆಜ್ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡ್ತಿದ್ದ. ಸ್ನೇಹಿತ ಶ್ರೀನಿಧಿ ಅನ್ನೊನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆಕಾಶ್ ತನ್ನ ಸ್ನೇಹಿತ ಶ್ರೀನಿಧಿ ಅವರ ತಂಗಿಯನ್ನು ಪ್ರೀತಿ ಮಾಡ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಶ್ರೀನಿಧಿ ತಂಗಿಯನ್ನ ಕರೆದುಕೊಂಡು ಆಕಾಶ್ ಓಡಿ ಹೋಗಿದ್ದನಂತೆ, ಇದೆ ವಿಷಯಕ್ಕೆ ಸ್ನೇಹಿತ ಆಕಾಶ್ ನನ್ನ ಮುಗಿಸಬೇಕು ಅಂತ ಶ್ರೀನಿಧಿ ಪ್ಲ್ಯಾನ್ ಮಾಡುತ್ತಿದೆ. ನಿನ್ನೆ ರಾತ್ರಿ ಆಕಾಶ್ ನನ್ನ ಕರೆದುಕೊಂಡು ಹೋಗಿ ಶ್ರೀನಿಧಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಈ ಕುರಿತು ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇನ್ನೊಂದಡೆ ಕಲಬುರಗಿ ನಗರದಲ್ಲಿ ಕ್ರೈಂ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಜನರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ, ನಿನ್ನೆ ಡಬರಾಬಾದ್ ಬಡಾವಣೆಯಲ್ಲಿ ಗ್ಯಾಂಗ್ವೊಂದು ಮನೆಯೊಂದಕ್ಕೆ ನುಗ್ಗಿ ಯುವಕನ ಹತ್ಯೆ ಮಾಡಿತ್ತು. ಇದೀಗ ಮತ್ತೊರ್ವ ಯುವಕನ ಕೊಲೆ ಆಗಿದೆ.
ದುಷ್ಕರ್ಮಿಗಳಿಗೆ ಪೊಲೀಸರು ಅಂದ್ರೆ ಭಯ ಇಲ್ಲ ಎಂಬಂತಾ ವಾತಾವರಣ ನಿರ್ಮಾಣ ಆಗುತ್ತಿದೆ. ಪೊಲೀಸತು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ.