Latest

ಕಾಲುವೆ ಹತ್ತಿರ ಆಟವಾಡಲು ಹೋಗಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸಾವು

ಬೆಳಗಾವಿ: ಜಿಲ್ಲೆಯ ಕೋಹಳ್ಳಿ ಗ್ರಾಮದಲ್ಲಿ ಕಾಲುವೆ ಹತ್ತಿರ ಆಟವಾಡಲು ಹೋಗಿ ಕಾಲು ಜಾರಿ ಕರಿಮಸೂತಿ ಕಾಲುವೆಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.

ಕೋಹಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹತ್ತಿರ ಹಾಯ್ದು ಹೋಗಿರುವ ಕರಿಮಸೂತಿ ಕಾಲುವೆಯೂ ನೀರು ತುಂಬಿ ಹರಿಯುತ್ತಿದೆ. ಶನಿವಾರ ಸಂಜೆ 5 ಸುಮಾರಿಗೆ ಮಕ್ಕಳಾದ ಶ್ರೀಧರ ಶಂಕರ ಪುಂಡಿಪಲ್ಲೆ (3), ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8), ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಈ ನಾಲ್ಕು ಜನ ಮಕ್ಕಳು ಆಟವಾಡಲು ಕಾಲುವೆ ಹತ್ತಿರ ಹೋಗಿದ್ದರು ಎನ್ನಲಾಗಿದೆ.

ಇದರಲ್ಲಿ ಶ್ರೀಧರ ಶಂಕರ ಪುಂಡಿಪಲ್ಲೆ (3), ವಿಶ್ವನಾಥ ವಿನಾಯಕ ಪುಂಡಿಪಲ್ಲೆ (8) ಇವರನ್ನು ಕಾಲುವೆಯಿಂದ ಹೊರ ತಗೆಯಲಾಗಿದ್ದು ಇವರು ಆರೋಗ್ಯವಾಗಿದ್ದು. ವಿಜಯ ವಿನಾಯಕ ಪುಂಡಿಪಲ್ಲೆ ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ ಇಬ್ಬರು ಸಾವನ್ನಪ್ಪಿದ್ದಾರೆ.

ಸದ್ಯ ಘಟನೆ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಮಕ್ಕಳು ಸಾವನ್ನಪಿದ ಘಟನೆಯನ್ನು ನೋಡಿ ಗ್ರಾಮಸ್ಥರ ಹಾಗೂ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು

Related Articles

Leave a Reply

Your email address will not be published.

Back to top button