Latest
Covid 19 positive RATE: ಕೆಲ ರಾಜ್ಯಗಳಲ್ಲಿ ಮತ್ತೆ ಕೋವಿಡ್ ಪಾಸಿಟಿವಿಟಿ ಹೆಚ್ಚಳ
ನವದೆಹಲಿ: ಹಬ್ಬಗಳ ಆಚರಣೆ ಪರಿಣಾಮ ಅನೇಕ ರಾಜ್ಯಗಳಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಾಗಿರುವುದು ವರದಿಯಾಗಿದೆ.
ಬಂಗಾಳದಲ್ಲಿ ಅ.23ರಂದು ಒಂದೇ ದಿನ 974 ಪಾಸಿಟಿವಿಟಿ ಪತ್ತೆಯಾಗಿದೆ. ಇದು ಕಳೆದ ಜು.10ರ ಬಳಿಕ ದಾಖಲಾದ ಗರಿಷ್ಠ ಪಾಸಿಟೀವ್ ದರವಾಗಿದೆ. ಅಸ್ಸಾಂನಲ್ಲಿ ಹೊಸ ಪ್ರಕರಣಗಳ ಪ್ರಮಾಣ ಶೇ.50.4ರಷ್ಟು ಹೆಚ್ಚಾಗಿದೆ.
ಕಳೆದ ಏಳು ದಿನಗಳಲ್ಲಿ ಒಟ್ಟು 2187 ಪ್ರಕರಣಗಳು ವರದಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಶೇ.38.4ರಷ್ಟು ಹೆಚ್ಚಿದೆ. ಕಳೆದ ಒಂದು ವಾರದಲ್ಲಿ 1,265 ಪಾಸಿಟೀವ್ ದಾಖಲಾಗಿದೆ.