Latest
Mysore Double Murder Case: ಮೈಸೂರು ಜೋಡಿ ಕೊಲೆ ಪ್ರಕರಣದ ಆರೋಪಿ ಬಂಧನ
ಮೈಸೂರು: ಕಳೆದ ಎರಡು ದಿನಗಳ ಹಿಂದೆ ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನ ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಕೆ.ಜಿ ಕೊಪ್ಪಲಿನ ನಿವಾಸಿ ಸಾಗರ್ ಬಂಧಿತ ಆರೋಪಿಯಾಗಿದ್ದು, ನಂಜನಗೂಡು ಬಳಿ ಸಾಗರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಿಎಂಶ್ರೀ ನಗರದಲ್ಲಿ ಈ ಸಾಗರ್ ತನ್ನ ತಂದೆ ಶಿವಪ್ರಕಾಶ್ ಮತ್ತು ತಂದೆಯ ಪ್ರೇಯಸಿ ಲತಾರನ್ನ ಕೊಲೆ ಮಾಡಿದ್ದನು.
ಶಿವಪ್ರಕಾಶ್ ಹಾಗೂ ಲತಾರನ್ನ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು. ಈಗ ಆರೋಪಿ ಸಾಗರ್ ನನ್ನು ಬಂಧಿಸಲಾಗಿದ್ದು, ಕೊಲೆಗೆ ಪ್ರಮುಖ ಕಾರಣ ಏನು ಎಂಬುದನ್ನ ತಿಳಿಯಲು ಪೊಲೀಸರು ಸಾಗರ್ ನನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ಘಟನೆ ಸಂಭಂದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.