ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಂದ ಕಾಂಗ್ರೆಸ್ಗೆ ಹಿನ್ನಡೆ ಆಗುವದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಮೊದಲ ಬಾರಿಗೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಹಾಗಂತ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಲ್ಲ, ಮುಸ್ಲಿಂ ಸಮುದಾಯ ಐಡಾಲೋಜಿಕಲ್ ಬೆಸ್ ಮೇಲೆ ಮತಚಲಾವಣೆ ಮಾಡ್ತಾರೆ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಅಂತ ರಾಜ್ಯಸಭೆ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಅಭ್ಯರ್ಥಿ ಹಾಕಿದ್ರೆ ಕಾಂಗ್ರೆಸ್ ಗೆ ಹಿನ್ನಡೆ ಅಂತ ತಿಳ್ಕೊಂಡ್ರೆ ಅದು ತಪ್ಪು ಕಲ್ಪನೆ. ಮುಸ್ಲಿಂ ಜನಾಂಗ ಐಡಲಾಜಿಕಲ್ ಬೆಸಸ್ ಮೇಲೆ ಮತಾದಾನ ಮಾಡ್ತಾರೆ. ಕಾಂಗ್ರೆಸ್ ಜಾತ್ಯಾತೀತ ತತ್ವದ ಮೇಲೆ ನಡೆಯುವ ಪಕ್ಷ ಹಾಗಾಗಿ ಈ ಎರಡು ಕ್ಷೇತ್ರಕ್ಕೆ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡ್ತಾರೆ ಎಂದರು.
ಬೆಲೆ ಏರಿಕೆ ಬಗ್ಗೆ ಮಾತಾಡಿದ್ರೆ ದೇಶ ವಿರೋಧಿ ಪಟ್ಟ:
ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಗಣನೀಯವಾಗಿ ಹೆಚ್ಚಳವಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ಬಗ್ಗೆ ಮಾತನಾಡಿದ್ರೆ ಜನ ವಿರೋಧಗಳು, ದೇಶ ವಿರೋಧಿಗಳು ಅಂತ ಪಟ್ಟ ಕಟ್ತಾರೆ. ಕೆಲವು ಜನ ಇಂಥಹ ವಿಕೃತ ಮನಸ್ಸಿನವರಿದ್ದಾರೆ. ನೂರು ಆಗ್ಲಿ ಪರವಾಗಿಲ್ಲ ಅಂತಾರೆ. ನಮ್ಮ ಕಾಲದಲ್ಲಿ 60 ರೂಪಾಯಿ ಪೆಟ್ರೋಲ್ ದೊರಕುತಿತ್ತು ಇದೀಗ ನೂರರ ಗಡಿ ದಾಟಿದರು ಯಾರು ಕೇಳ್ತಿಲ್ಲ. ಕಚ್ಚಾ ತೈಲ ಬೆಲೆ ಕಡಿಮೆ ಇದ್ರು ದೇಶದಲ್ಲಿ ಪೆಟ್ರೋಲ್ ಡೀಸೆಲ್ ನೂರರ ಗಡಿ ದಾಟುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಹೊರೆ ಆಗ್ತಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮೊದಲ ಬಾರಿಗೆ ದಲಿತ ಸಿಎಂ:
ಛತ್ತೀಸಗಡ ದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲ, ಅವರೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವು ಸರಿಯಾಗಿದೆ. ದೇಶದಲ್ಲೆ ಮೊದಲ ಬಾರಿಗೆ ದಲಿತ ಮುಖ್ಯಮಂತ್ರಿ ಮಾಡಿದ್ದಾರೆ. ಎಲ್ಲರು ಅವರಿಗೆ ಸನ್ಮಾನ ಸಹಕಾರ ನೀಡಬೇಕು ಅಂತ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಹೈಕಮಾಂಡ ನಿರ್ಧಾರವೆ ಅಂತಿಮ ನಿರ್ಧಾರ ಎಂದರು.