ಬಲವಂತದ ಮತಾಂತರಕ್ಕೆ ಕಾಂಗ್ರೆಸ್ ವಿರೋಧವಿದೆ, ಆದರೆ ಸ್ವಯಂ ಪ್ರೇರಿತ ಮತಾಂತರಕ್ಕೆ ಬೆಂಬಲ: ಸಿದ್ದರಾಮಯ್ಯ
ಕೋಲಾರ: ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಆದರೆ, ಸ್ವಯಂ ಪ್ರೇರಿತರಾಗಿ ಮತಾಂತರಗೊಂಡರೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವ್ಯಕ್ತಿಯನ್ನು ಬಲವಂತದಿಂದ ಮತಾಂತರ ಮಾಡಬಾರದು ಎಂದು ಮತಾಂತರ ತಡೆಗೆ ಸರ್ಕಾರ ಬಿಲ್ ಪಾಸ್ ಮಾಡಬೇಕು ಎಂದರು.
ಕೆ ಸಿ ವ್ಯಾಲಿ ಕೊಳಚೆ ನೀರಿನ ಯೋಜನೆ ಎಂದು ನನ್ನ ಮೇಲೆ ಗೂಬೆ ಕೂರಿಸುತ್ತಾರೆ, ಜಿಲ್ಲೆಯಲ್ಲಿ ಅಂತರ್ ಜಲ ಮಟ್ಟ ಸಾವಿರಾರು ಅಡಿ ಪಾತಾಳಕ್ಕೆ ಕುಸಿದಿತ್ತು. ಕೆ ಸಿ ವ್ಯಾಲಿ ಯೋಜನೆಯಿಂದ ಕೋಲಾರದ ಕೆರೆಗಳು ತುಂಬಿರುವುದರಿಂದ ಜಿಲ್ಲೆಯಲ್ಲಿ ಅಂತರ್ ಜಲ ವೃದ್ದಿಯಾಗಿದೆ ಹೀಗಿರುವ ಯೋಜನೆಯನ್ನು ಮಣ್ಣಿನ ಮಕ್ಕಳು ಟೀಕಿಸುತ್ತಾರೆ ಎಂದು ದೇವೇಗೌಡರ ಕುಟುಂಬದ ಬಗ್ಗೆ ಸಿದ್ದರಾಮಯ್ಯ ಕಾಳೆದರು.
ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತೆ ಆಗ ಬಾಕಿಯಿರುವ ಯೋಜನೆಗಳನ್ನು ಕೊಡುತ್ತೇವೆ. ಈಗಿನ ಬಿಜೆಪಿ ಸರ್ಕಾರದಲ್ಲಿ ಹಣವೇ ಇಲ್ಲ, ನಮ್ಮ ಸರ್ಕಾರದಲ್ಲಿ ಹಣಕ್ಕೆ ಯಾವುದೇ ಕೊರತೆ ಇರಲಿಲ್ಲ. ಆದ್ದರಿಂದ ನಮ್ಮ ಸರ್ಕಾರ ಇದ್ದಾಗ ಏಳು ಕೆ ಜಿ ಅಕ್ಕಿ ಕೊಡುತ್ತಿದ್ದವು. ಆದರೆ ಈಗ ಅದನ್ನು ಎರಡು ಕೆಜಿ ಮಾಡಿದ್ದಾರೆ. ಉಮೇಶ್ ಕತ್ತಿಗೆ ಸಕ್ಕರೆ ಕಾಯಿಲೆ ಇರಬೇಕು ಅದಕ್ಕೆ ಅವರು ಬಡವರಿಗೆ ಕೊಡುವ ಅಕ್ಕಿಯನ್ನು ಕಡಿಮೆ ಮಾಡಿದ್ದಾರೆ ಎಂದು ವ್ಯಂಗವಾಡಿದರು.