Latest

Congress tweet: ಬಿಜೆಪಿಗೆ ಭ್ರಷ್ಟಾಚಾರವೇ ಮನೆ ದೇವರು: ಟ್ವೀಟರ್​ನಲ್ಲಿ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಬಿಜೆಪಿಗೆ ಭ್ರಷ್ಟಾಚಾರವೇ ಮನೆ ದೇವರು ಎಂದು ಪ್ರದೇಶ ಕಾಂಗ್ರೆಸ್ ಹಂಗಿಸಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಶುಕ್ರವಾರ ಈ ಬಗ್ಗೆ ಪಕ್ಷ ಟ್ಟಿಟ್ ಮಾಡಿದೆ.

ಸಾಮಾನ್ಯ ಸಾರಿಗೆ ನೌಕರನಾಗಿದ್ದವನು ಯಡಿಯೂರಪ್ಪ ಅವರ ಸಹಾಯಕನಾದ ಮಾತ್ರಕ್ಕೆ 2 ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂದಾದರೆ, ರೈಸ್ ಮಿಲ್ ನಲ್ಲಿ ಲೆಕ್ಕ ಬರೆಯುತ್ತಿದ್ದವರು ಇನ್ನೆಷ್ಟು ಒಡೆಯನಾಗಿರಬಹುದು ಎಂದು ಕಾಂಗ್ರೆಸ್ ಯಡಿಯೂರಪ್ಪ ಹಾಗೂ ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.

ಇನ್ನೊಂದು ಟ್ವಿಟ್ ನಲ್ಲಿ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಎಷ್ಟಿದೆ ಎಂದರೆ, ವಿಧಾನಸೌಧದ ನೌಕರರು ಕೆಲಸ ಕೊಡಿಸುವ ಡೀಲಿಗಿಳಿಯುತ್ತಾರೆ ಎಂದು ಕೆಪಿಸಿಸಿ ಬಿಜೆಪಿಯ ಕಾಲೆಳೆದಿದೆ.

ಕಂದಾಯ ಸಚಿವ ಆರ್.ಅಶೋಕ್ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಸಹಾಯಕರು ವಸೂಲಿ, ಡೀಲ್ ಗಳಲ್ಲಿ ತೊಡುಗುತ್ತಾರೆ, ಯಡಿಯೂರಪ್ಪ ಅವರ ಸಹಾಯಕ ಎರಡು ಸಾವಿರ ಕೋಟಿ ರೂಪಾಯಿ ದೋಚುತ್ತಾನೆ. ಸಣ್ಣವರ ಲೂಟಿ ಇಟ್ಟಿರುವಾಗ ದೊಡ್ಡವರ ದರೋಡೆ ಎಷ್ಟಿರಬಹುದು ಎಂದು ರಾಜ್ಯ ಕಾಂಗ್ರೆಸ್ ಟ್ವಿಟ್ ಮೂಲಕ ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ

Related Articles

Leave a Reply

Your email address will not be published.

Back to top button