Latest

B K Hariprasad: ಐಟಿ ದಾಳಿಯ ಹಿಂದೆ ಬಿಎಸ್​ವೈ ಅವರನ್ನು ಮುಗಿಸುವ ಪ್ರಯತ್ನ ಕಾಣುತ್ತಿದೆ: ಬಿ ಕೆ ಹರಿಪ್ರಸಾದ್

ಧಾರವಾಡ : ಬಿಎಸ್​ವೈ ಅವರನ್ನ ಟಾರ್ಗೆಟ್ ಮಾಡಿಯೇ ಅವರ ಆಪ್ತರ ಮೇಲೆ ದಾಳಿ ಮಾಡಲಾಗುತ್ತಿದೆ. ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರೆ ಈ ರೀತಿ ಪ್ರಯತ್ನ ಮಾಡುತ್ತಿರುವದು ಎದ್ದು ಕಾಣುತ್ತಿದೆ. ಬಿಎಸ್‌ವೈ ಸಿಎಂ ಆಗಿದ್ದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಕ್ಕೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿಲಾಗಿತ್ತು. ಆದರೆ ಆದನ್ನು ಬಿಜೆಪಿಗರು ತಳ್ಳಿ ಹಾಕುತ್ತಲ್ಲೇ ಬಂದಿದ್ದರು ಎಂದು ವಿಧಾನ ಪರಿಷತ್​​ ಸದಸ್ಯ ಬಿ. ಕೆ. ಹರಿಪ್ರಸಾದ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪನವರ ಮೇಲೆ ಅವರದೇ ಪಕ್ಷದ ಮುಖಂಡರು ಈ ಹಿಂದೆ ಸಾಕಷ್ಟು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಹಾಗಾಗಿಯೇ ಬಿಎಸ್‌ವೈ ಅವರನ್ನು ಅಂದು ಸಿಎಂ ಸ್ಥಾನದಿಂದ ಬಿಜೆಪಿ ಹೈಕಮಾಂಡ್ ಕೆಳಗಿಳಿಸಿತ್ತು. ಆದರೆ ವಯಸ್ಸಿನ ಆಧಾರದ ಮೇಲೆ ಪಕ್ಷದ ಸಿದ್ಧಾಂತ ಮೇಲೆ ಬದಲಾವಣೆ ಮಾಡಲಾಗಿದೆ ಎಂದು ಬಿಜೆಪಿಗರು ಹೇಳುತ್ತಾ ಬಂದಿದ್ದರು. ಆದರೆ ಭ್ರಷ್ಟಾಚಾರದಿಂದಲ್ಲೇ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ಮಾಡಿದೆ‌ ಅನ್ನುವುದಕ್ಕೆ ಇವತ್ತು ಮುಂಜಾನೆ ಅವರ ಆಪ್ತರ ಮೇಲೆ ನಡೆಯುತ್ತಿರುವ ದಾಳಿಯೇ ಅದನ್ನು ಸಾಬೀತು ಮಾಡುತ್ತಿದ್ದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರು ಆಲ್ ಟೈಮ್ ಮನಿ ಎಟಿಎಂ ಇದ್ದ ಹಾಗೆ ಇದ್ದರೂ, ಯಾವಾಗ ಅವರಿಂದ ಕಪ್ಪಾ ಹೋಗೋದು ನಿಂತೋ ಆಗ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಾಗಿದೆ. ಯಡಿಯೂರಪ್ಪ ಈ ಮೊದಲೇ ಮೂಲೆಗುಂಪು ಆಗಿದ್ದರು. ಇಂದು ಅವರ ಆಪ್ತನ ಮೇಲೆ ಎಸಿಬಿ ರೇಡ್ ಆಗಿದೆ. ಇದರಿಂದಾಗಿ ಅವರ ರಾಜಕೀಯ ಜೀವನಕ್ಕೆ ತಿಲಾಂಜಲಿ ಹಾಡಲು ಬಿಜೆಪಿ ಪಕ್ಷದವರೇ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಕುರಿತು ಮಾತನಾಡಿದ ಅವರು, ಬಿಜೆಪಿ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button