Latest

ಪ್ರಧಾನಿ ಮೋದಿಗೆ ಟೀಕಿಸುತ್ತಿರುವ ಕಾಂಗ್ರೆಸ್ ‌ಗೆ ಮತದಾರ ಬುದ್ದಿ ಕಲಿಸುತ್ತಾನೆ: ಸಚಿವ ಕೆ ಎಸ್ ಈಶ್ವರಪ್ಪ

ಕಲಬುರಗಿ: ಕಾಂಗ್ರೆಸ್ಸಿಗರು ಡಿಕ್ಷನರಿಯಲ್ಲಿ ಇಲ್ಲದಿರುವಂತಹ ಬೇಡದಿರುವಂತಹ ಪದಗಳನ್ನು ಬಳಸುತ್ತಿದ್ದಾರೆ. ಇದನ್ನ ಮತದಾರರು ಗಮನಿಸುತ್ತಿದ್ದಾರೆ. ಮುಂದೆ ಇದು ಅವರಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ನವರು ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ವಿರುದ್ಧ ಟಿಕೆ ಮಾಡುತ್ತಿರುವ ಹಿನ್ನಲೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ದೇಶವೇ ಮೆಚ್ಚಿನ ನಾಯಕನ ಬಗ್ಗೆ ಕಾಂಗ್ರೆಸ್​ನವರು ಹಗುರವಾಗಿ ಮಾತನಾಡುತ್ತಿದ್ದಾರೆ‌. ಬೇಡದಿರುವ ಪದಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿಯವರನ್ನ ಅವಮಾನಿಸಿದ್ದಾರೆ‌. ಇದೆಲ್ಲವನ್ನೂ ದೇಶದ ಮತದಾರರು ಗಮನಿಸುತ್ತಿದ್ದಾರೆ‌ ಎಂದರು.

ದೇಶದ ಪ್ರಧಾನಿಯಾದ ಮೋದಿಯವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಗಮನಿಸುತ್ತಿದ್ದಾರೆ. ನೂರು ಕೋಟಿ ವ್ಯಾಕ್ಸಿನೇಷನ್ ಸಾಧನೆ ಇಡೀ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ‌. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿಜ್ಞಾನಿಗಳಿಗೆ, ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗಳಿಗೆ, ಡಿ‌ ಗ್ರೂಪ್ ನೌಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಈ ಕಾಂಗ್ರೆಸ್ನವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನವರ ವರ್ತನೆಗೆ ಜನರು ಉತ್ತರ ಕೊಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷವಾಗಿದೆ. ಅದರಲ್ಲೂ ಸಹ ಎರಡು ಗುಂಪುಗಳಿವೆ. ಯಾವಾಗ ಕಾಂಗ್ರೆಸ್ 2 ಗುಂಪುಗಳ ಆಗುತ್ತೋ ಗೊತ್ತಿಲ್ಲ. ಈ ದೇಶವನ್ನು ಕಾಯುತ್ತಿರುವುದು ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ ಬಿಜೆಪಿಗೆ ಮತ ನೀಡುತ್ತಾರೆ ಎಂದಿದ್ದಾರೆ.

ಇನ್ನು ಭಾರತ -ಪಾಕಿಸ್ತಾನ T-20 ಕ್ರಿಕೆಟ್ ಪಂದ್ಯ ಹಿನ್ನಲೆ ನಮ್ಮಲ್ಲಿ ಕೆಲ ರಾಸ್ಟ್ರದ್ರೋಹಿಗಳು ಕ್ರಿಕೆಟಲ್ಲೂ ಪಾಕಿಸ್ತಾನ ಪರ ಇದ್ದಾರೆ. ಆಟವನ್ನ ಆಟದ ರೀತಿಯಲ್ಲಿಯೇ ನೋಡಬೇಕು. ಆದರೆ, ಆಟದಲ್ಲೂ ದ್ವೇಷ ಕಾಣೋದು ಅವಶ್ಯಕತೆ ಇಲ್ಲ. ಕ್ರೀಡಾಪಟುಗಳ ಶ್ರಮಕ್ಕೆ ನಾನು ಹಾರೈಸುತ್ತೇನೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

Related Articles

Leave a Reply

Your email address will not be published.

Back to top button