ಜಾತಿ ಲೆಕ್ಕಾಚಾರದಲ್ಲಿ ರಾಜಕೀಯ ಮಾಡಲ್ಲ: ಡಿ ಕೆ ಶಿವಕುಮಾರ್
ಕಲಬುರಗಿ: ನಾವು ಜಾತಿ ಮೇಲೆ ಲೆಕ್ಕಾಚಾರ ಇಟ್ಟು ರಾಜಕೀಯ ಮಾಡಲ್ಲಾ, ನೀತಿ ರಾಜಕೀಯ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಇದೆ ವೇಳೆ ಮಾಜಿ ಸಚಿವ ಮನಗೂಳಿ ಸಾಯುವ ಮೊದಲು ಡಿ.ಕೆ.ಭೇಟಿ ಮಾಡಿರಲಿಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದರು. ಮನಗೂಳಿ ಇವತ್ತು ಇಲ್ಲಾ ಅವರ ಮಗ ಇದ್ದಾರೆ. ಸಾಯುವ ಮುನ್ನ ಸ್ವತಃ ಮನಗೂಳಿ ಅವರೇ ನಮ್ಮ ಮಗನ ಜವಾಬ್ದಾರಿ ನಿಮ್ಮದು. ಅವನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಹೀಗಾಗಿ ಸಿಂದಗಿ ಚುನಾವಣೆ ಜಾಸ್ತಿ ಉತ್ಸಾಹ ನೋಡಿರುವೆ. ಸಿಂದಗಿಯಲ್ಲಿ ಕಾಂಗ್ರೆಸ್ ಸಮೂಹ. ಒಗ್ಗಟ್ಟಾಗಿ ಅಶೋಕ ಮನಗೂಳಿ ಅವರು ಗೆಲುವಿಗೆ ಶ್ರಮಿಸಲಿದೆ. ಅಲ್ಪಸಂಖ್ಯಾತರು ಪ್ರಜ್ಞಾವಂತರಿದ್ದಾರೆ ಯಾರಿಗೆ ಮತ ಹಾಕಿದ್ರೆ ಉತ್ತಮ ಅನ್ನೋದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಇನ್ನು ಇದೆ ವೇಳೆ ಸಿಎಂ ಇಬ್ರಾಹಿಂ ಅವರ ದಲಿತರಿಗೆ, ಮುಸ್ಲಿಂ ಮರಿಗೆ ಸಿಎಂ ಸ್ಥಾನ ನೀಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲಾ , ತಿಳಿದುಕೊಂಡು ಮಾತನಾಡ್ತೇನೆ ಎಂದಿದ್ದಾರೆ. ಇನ್ನು ಸಲಿಂ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡದ ಡಿ.ಕೆ.ಶಿವಕುಮಾರ್ ನಿರಾಕರಿಸಿದ್ದಾರೆ.