Latest

ಜನರ ಮನಸ್ಸು ಗೆಲ್ಲುವಂತಹ ಮಾತುಗಳನ್ನು ಆಡಬೇಕು: ಕಟೀಲ್​​​ಗೆ ಸಿಎಂ ಬೊಮ್ಮಾಯಿ ಕಿವಿಮಾತು

ಧಾರವಾಡ: ಉಪ ಚುನಾವಣೆಗಳಲ್ಲಿ ಜನಪ್ರತಿನಿಧಿಗಳು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಯಾವುದೋ ಒಂದು ವಾದಕ್ಕೆ ಬಿದ್ದು, ಆ ವಾದವನ್ನು ಗೆಲ್ಲುವುದಕ್ಕೆ ಹೋಗುವುದು ಸೂಕ್ತವಲ್ಲ. ಜನಪ್ರತಿನಿಧಿಗಳು ಜನರ ಸಮಸ್ಯೆ, ಕ್ಷೇತ್ರ ಅಭಿವೃದ್ಧಿ ಕುರಿತು ಮಾತನಾಡಿದ್ದರೆ ಅದೂ‌ ಎಲ್ಲರಿಗೂ ಒಳ್ಳೆಯದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿವಿ ಮಾತು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಉಪಚುನಾವಣೆಗಳಲ್ಲಿ ಜನಪ್ರತಿನಿಧಿಗಳು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಜನರು ಮಾತಾಡುವ ಸ್ಥಿತಿ ಬಂದಿದೆ. ಜನತೆಯ ಅಭಿಪ್ರಾಯವನ್ನು ಹಾಗೂ ಜನರ ಧ್ವನಿಯನ್ನು ಮಾಧ್ಯಮಗಳು ಬಿಂಬಿಸುತ್ತಿವೆ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ವೈಯಕ್ತಿಕ ಟೀಕೆ ಟಿಪ್ಪಣಿಗಳನ್ನು ಬಿಟ್ಟು, ಅಭಿವೃದ್ಧಿಗಳ ಬಗ್ಗೆ ಮಾತಾನಾಡು ಮೂಲಕ ಉಪ ಚುನಾವಣೆಯಲ್ಲಿ ಮತದಾರರ ಮನಸ್ಸು ಗೆಲ್ಲುವ ಹೇಳಿಕೆಗಳನ್ನು ನೀಡುವುದು ಉತ್ತಮ ಎಂದರು.

ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣಾ ತರಬೇತಿ ನೀಡಲು ಸಿದ್ಧತೆ:

ಸುರಕ್ಷತೆ ದೃಷ್ಟಿಯಿಂದ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲಾಗುವುದು. ಸ್ವಯಂ ಸುರಕ್ಷತೆಗೆ ತರಬೇತಿ ನೀಡುವ ಕೆಲಸವನ್ನು ಕೆಎಸ್ ಆರ್ ಪಿಗೆ ವಹಿಸಲಾಗುವುದು. ಪೊಲೀಸ್ ತರಬೇತಿ ಶಾಲೆಗಳಲ್ಲಿ ಕೆಲಸ ಮಾಡಿದ ನಿವೃತ್ತ ಪ್ರಾಂಶುಪಾಲರನ್ನು ಹಾಗೂ ಅವರ ಅನುಭವಗಳನ್ನು ತರಬೇತಿ‌ ನೀಡಲು ಬಳಸಿಕೊಳ್ಳಲಾಗುವುದು ಎಂದರು.

ಉತ್ತರಾಖಂಡದಲ್ಲಿ‌ ಸಿಲುಕಿರುವ ಕನ್ನಡಿಗರ ರಕ್ಷಣೆ ಕ್ರಮ:

ಕೇರಳ ಹಾಗೂ ಉತ್ತರಾಖಂಡ ಭೂ ಕುಸಿತ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ಕೇರಳ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಈಗಾಗಲೇ ದೂವಾಣಿ ಕರೆಯ ಮೂಲಕ ಮಾತನಾಡಲಾಗಿದೆ. ನಮ್ಮಿಂದಾಗುವ ಅಗತ್ಯ ನೆರವು‌ ನೀಡುವುದಾಗಿಯೂ ತಿಳಿಸಿದ್ದೇನೆ. ಉತ್ತರಾಖಂಡದಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗಾಗಿ ಕ್ರಮ‌ಕೈಗೊಳ್ಳಲಾಗಿದೆ. ತುಷಾರ್ ಗಿರಿನಾಥ್ ಅವರನ್ನು ನೋಡಲ್ ಅಧಿಕಾರಿಯಾಗಿ‌ ನೇಮಿಸಲಾಗಿದೆ. ಅವರು ಕೂಡಾ ಈಗ ಉತ್ತರಾಖಂಡ ಸರ್ಕಾರದ ಹಾಗೂ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button