Latest

ಕೋವಿಡ್ -19 ವೈರಸ್ ಬಹಳಷ್ಟು ಪಾಠವನ್ನು ಕಲಿಸಿದೆ: ಸಿಎಂ ಬೊಮ್ಮಾಯಿ

ಧಾರವಾಡ: ಕೋವಿಡ್ ಬಹಳಷ್ಟು ಪಾಠವನ್ನ ಕಲಿಸಿದೆ. ನಮ್ಮ ದೇಶದಲ್ಲಿ ವೈರಲ್ ನ್ನ ಬಹಳ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಮೆಂಟಲಿ ಪ್ರಿಪೇರ್ ಆದಾಗ ಮಾತ್ರ ಇವೆಲ್ಲವನ್ನ ಮೆಟ್ಟಿ ಹಾಕಲು ಸಾಧ್ಯವಾಗಿದೆ‌ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೀಪ ಬೆಳಗಿಸುವ ಮೂಲಕ 100 ಕೋಟಿ ಕೊರೊನಾ ಲಸಿಕೆ ಪೂರೈಸಿದ ಸಂಭ್ರಮಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಗೆ ದೇಶದ ಜನಾ ತತ್ತರಿಸಿ ಹೋಗಿದ್ದರು. ಕೊರೊನಾವನ್ನು ತೊಲಗಿಸಲು ಸರ್ಕಾರ ಕೊರೊನಾ ಲಸಿಕೆಯನ್ನು ಇಡೀ ದೇಶಾದ್ಯಂತ ನೀಡುತ್ತಾ ಬರುತ್ತಿದೆ. ಕೇವಲ ಹತ್ತು ತಿಂಗಳಲ್ಲಿ ಸುಮಾರು 100 ಕೋಟಿ ಲಸಿಕೆಯನ್ನು ಹಾಕಲಾಗಿದೆ. ಈಗ ಭಾರತ ಶತಕೋಟಿ ಡೋಸ್ ಲಸಿಕೆ ವಿತರಿಸಿದ ಮಹತ್ವದ ಮೈಲಿಗಲ್ಲು ಪೂರೈಸಿದ್ದು, ಇಂದು ಭಾರತಾದ್ಯಂತ 100 ಕೋಟಿ ಲಸಿಕಾ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದರು.

ಯಾವುದಾದರೂ ವ್ಯಾಪಕ ರೋಗಕ್ಕೆ ಲಸಿಕರಾಣವೇ ಮದ್ದು ಅನ್ನೋದು 100 ವರ್ಷಗಳ ಹಿಂದೆ ಸಾಬೀತಾಗಿದೆ. ಹಲವಾರು ಮಾನವನ ಜೀವಗಳು ಹಾನಿಯಾಗಿವೆ. ಸರ್ಕಾರ ಕೋವಿಡ್ ನ್ನ ಎದುರಿಸಿದ್ದರಿಂದ ಕೋವಿಡ್ ನಿರ್ವಹಣೆಯಾಗಿದೆ. ಖಾಸಗಿಯವರಿಗಿಂತಲೂ ಸರ್ಕಾರದ ಆಸ್ಪತ್ರೆಗಳು ಬಹಳ ಕೆಲಸ ಮಾಡಿವೆ. ಅವರು ಮಿನಾಮೇಷ ಎಣಿಸುತ್ತಾರೆ. ಆದ್ರೆ ಸರ್ಕಾರಿ ಆಸ್ಪತ್ರೆಗಳು ಬಹಳ ಹಾಗೇ ಮಾಡಲಿಲ್ಲ. 24 ಸಾವಿರ ಬೆಡ್ ಗಳ ನಿರ್ಮಾಣ ಆಗಿದೆ 6 ಸಾವಿರ ಆಕ್ಸಿಜೆನ್ ನಿರ್ಮಾಣ ಆಗಿವೆ. ಕೋವಿಡ್ ನಿಂದಾಗಿ ತಾಲೂಕು ಕೇಂದ್ರಗಳ ಅಸ್ಪತ್ರೆಗಳು‌ ಈಗ ಅಪ್ಡೇಟ್ ಆಗಿವೆ. ಕೋವಿಡ್ ಆರಂಭವಾದಾಗ ಯಾವುದೇ ಸಲಕರಣೆ ಇರಲಿಲ್ಲ ಎಂದು ತಿಳಿಸಿದರು.

ಪಿಪಿಈ ಕಿಟ್ ಗಳು ಇರಲಿಲ್ಲ, ಚೀನಾದಿಂದ ಅವುಗಳನ್ನ ತರಿಸುತ್ತಿದ್ದೆವು. ಆದ್ರೆ ಈಗ ನಾವೇ ಎಲ್ಲವನ್ನ ರಫ್ತು ಮಾಡುವಷ್ಟು ನಾವು ಮುಂದಾಗಿದ್ದೇವೆ. ಪ್ರಧಾನಿ ಮಾತನಾಡುವ ಬದಲು ಮಾಡಿ ತೋರಿಸಿದ್ದಾರೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವಮ್ನು ಶ್ಲಾಘಿಸಿದರು.

ಇನ್ನೂ ಎಲ್ಲ ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಅಸ್ಪತ್ರೆಗಳಿಗೂ ಧನ್ಯವಾದ ತಿಳಿಸಿದ ಮುಖ್ಯಂಮತ್ರಿ‌ ಬಸವರಾಜ ಬೊಮ್ಮಾಯಿ ಅವರು, ಇದೇ ವೇಳೆ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನಿ ಗೌರವಿಸಿದರು.

Related Articles

Leave a Reply

Your email address will not be published.

Back to top button