Latest

ದೇಶದಲ್ಲಿ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ

ಧಾರವಾಡ: ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಒಡೆದು ಮನೆಯಾಗಿದೆ. ರಾಜ್ಯದಲ್ಲಿಯು ಕೂಡಾ ಕಾಂಗ್ರೆಸ್ ಅದೇ ಪರಿಸ್ಥಿತಿಯಲ್ಲಿ ಇದೆ. ಅದರ ಬಗ್ಗೆ ಡಿಕೆ ಶಿವಕುಮಾರ್ ಅವರು ಗಮನ ಹರಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಟಾಂಗ್​ ನೀಡಿದರು.

ಹುಬ್ಬಳ್ಳಿ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು, ಹಾನಗಲ್ ಚುನಾವಣೆ ಬಳಿಕ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಡಿ.ಕೆ ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿದರು. ಸಿಂದಗಿಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸಿದೆ. ‌ಆದರೆ, ದೇಶದಲ್ಲಿ ಕಾಂಗ್ರೆಸ್ ಹೋಳಾಗುತ್ತಿದೆ.‌ ಅದರ ಬಗ್ಗೆ ಶಿವಕುಮಾರ್​ ಗಮನಹರಿಸಲಿ‌ ಎಂದರು.

ಮಾಧ್ಯಮದವರ ಮೇಲೆ ಸಿಎಂ ಗರಂ:

ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಅಹ್ವಾನಿಸಿದಾಗ, ಸಿಎಂ ಗರಂ ಆದ ಪ್ರಸಂಗ ನಡೆಯಿತು. ಸಿಕ್ಕ ಸಿಕ್ಕಲ್ಲಿ ಇದನ್ನ ರೂಢಿ ಮಾಡಿಕೊಳ್ಳಬೇಡಿ ಎಂದು ಮಾಧ್ಯಮವರಿಗೆ ಹೇಳಿ ನಂತರ ಮುಂದಕ್ಕೆ ತೆರಳಿದರು.

Related Articles

Leave a Reply

Your email address will not be published.

Back to top button