Latest

ವುಹಾನ್ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಸೃಷ್ಟಿ: ಅಮೆರಿಕದ ವರದಿಯನ್ನು ಅಲ್ಲಗೆಳೆದ ಚೀನಾ

ಶಾಂಘೈ: ಚೀನಾದ ವುಹಾನ್ ಪ್ರಯೋಗಾಲದಯಲ್ಲಿ ಸಂಶೋಧನೆಯ ವೇಳೆ ಸೋರಿಕೆಯಾದ ವೈರಾಣು ಕೊರೋನ ಸೋಂಕಿನ ಸೃಷ್ಟಿಗೆ ಕಾರಣವಾಗಿದೆ ಎಂಬ ಅಮರಿಕದ ಗುಪ್ತಚರ ವರದಿಯು ಅವೈಜ್ಞಾನಿಕ ಮತ್ತು ವಿಶ್ವಾಸಾರ್ಹವಲ್ಲ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ವಾಂಗ್ ವೆನ್ ಬಿನ್ ಹೇಳಿದ್ದಾರೆ.

ಗುಪ್ತಚರ ವರದಿಯನ್ನು ಚೀನಾ ನಿರಾಕರಿಸುತ್ತಲೇ ಬಂದಿದೆ. ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ಅಧ್ಯಯನದ ಬಳಿಕ ಬಿಡುಗಡೆಗೊಳಿಸಿರುವ ವರದಿಯಲ್ಲೂ ಈ ವಾದವನ್ನು ಅಲ್ಲಗೆಳೆಯಲಾಗಿದ್ದು, ವನ್ಯಜೀವಿಗಳ ಮಾರಾಟ ವ್ಯವಹಾರದಲ್ಲಿ ಕೊರೋನಾ ಸೋಂಕು ಮಾನವನಿಗೆ ಹರಡಿರುವ ಸಾಧ್ಯತೆಯಿದೆ ಎಂದು ಚೀನಾ ಹೇಳಿದೆ.

ಅಮೆರಿಕವು ಫೋರ್ಟ್ ಡೆಟ್ರಿಕ್ನಲ್ಲಿರುವ ಪ್ರಯೋಗಾಲಯವನ್ನು ಅಂತರಾಷ್ಟ್ರೀಯ ತಜ್ಞರ ವೀಕ್ಷಣೆಗೆ ಮುಕ್ತಗೊಳಿಸಬೇಕು ಎಂದು ವೆನ್ಬಿನ್ ಪುನರುಚ್ಚರಿಸಿದ್ದಾರೆ.

ಕೋವಿಡ್-19 ಸೋಂಕಿಗೆ ಕಾರಣವಾಗಿರುವ ಸಾರ್ಸ್ ಸಿಒವಿ-2 ರೋಗಾಣು ಪ್ರಾಕೃತಿಕವಾಗಿ ಹುಟ್ಟಿಕೊಂಡಿದೆ ಮತ್ತು ಪ್ರಯೋಗಾಲಯದಲ್ಲಿ ವೈರಾಣು ಸೋರಿಕೆಯಾಗಿ ಹರಡಿದೆ ಎಂಬ ಎರಡೂ ಮಾಹಿತಿಗಳು ವಿಶ್ವಾಸಾರ್ಹವಾಗಿದೆ. ಆದರೆ ಸತ್ಯ ಎಂದಿಗೂ ತಿಳಿಯದು ಎಂದು ಅಮೆರಿಕ ಗುಪ್ತಚರ ಇಲಾಖೆಯ ಪರಿಷ್ಕೃತ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ ವಿದೇಶ ವ್ಯವಹಾರ ಇಲಾಖೆ ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸುಳ್ಳೇ ಆಗಿರುತ್ತದೆ. ಅಮರಿಕದ ಗುಪ್ತಚರ ಇಲಾಖೆ ಕುಟಿಲತನ ಮತ್ತು ವಂಚನೆಗೆ ಹೆಸರಾಗಿದೆ ಎಂದು ಟೀಕಿಸಿದೆ.

ಕೋವಿಡ್ ಸೋಂಕಿನ ಮೂಲ ಪತ್ತೆಹಚ್ಚುವುದು ಗಂಭೀರ ಮತ್ತು ಸಂಕೀರ್ಣ ವಿಷಯ. ಜಾಗತಿಕ ವಿಜ್ಞಾನಿಗಳ ಸಹಕಾರದಿಂದ ಮಾತ್ರ ಇದನ್ನು ಸಂಶೋಧನೆ ನಡೆಸಬಹುದು ಎಂದು ಚೀನಾ ಹೇಳಿದೆ.

Related Articles

Leave a Reply

Your email address will not be published.

Back to top button