Latest

ಲಖೀಂಪುರ ಪ್ರಕರಣದ ನ್ಯಾಯಯುತ ತನಿಖೆಗೆ ಅಜಯ್ ಮಿಶ್ರಾ ರಾಜೀನಾಮೆ ನೀಡಲಿ: ರಾಕೇಶ್ ಟಿಕಾಯತ್

ನವದೆಹಲಿ: ಲಖೀಂಪುರ ಖೇರಿಯಲ್ಲಿ ರೈತರ ಹತ್ಯೆ ಮಾಡಿರುವ ಪ್ರಕರಣದ ನ್ಯಾಯಯುತ ತನಿಖೆ ನಡೆಯಬೇಕಾದರೆ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಲಿ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.

ಹಿಂಸಾಚಾರದಲ್ಲಿಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ಅಜಯ್ ಮಿಶ್ರಾ ಪುತ್ರ ಆಶಿಶ್ ಪ್ರಮುಖ ಆರೋಪಿ ಎಂದು ಗೊತ್ತಾದರೂ ಆತನನ್ನು ಬಂಧಿಸಿರಲಿಲ್ಲ. ಬಳಿಕ ಆರೋಪಿಯನ್ನೇಕೆ ಬಂಧಿಸಿಲ್ಲವೆಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ಮೇಲಷ್ಟೇ ಆಶಿಶ್ ನನ್ನು ಬಂಧಿಸಲಾಗಿತ್ತು. ಆದರೂ ಈ ಪ್ರಕರಣದ ತನಿಖೆಗೆ ನೇಮಿಸಿರುವ ವಿಶೇಷ ತನಿಖಾ ತಂಡದ ಮೇಲೆ ಆರೋಪಿ ಕಡೆಯಿಂದ ರಾಜಕೀಯ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಆರೋಪಿಯಾಗಿರುವ ಸಚಿವರ ಪುತ್ರನನ್ನು ಕೆಲವರು ಕೆಂಪು ರತ್ನಗಂಬಳಿಯೊಂದಿಗೆ ಸ್ವಾಗತಿಸಿರುವುದು ರೈತರ ಆಕ್ರೋಶವನ್ನು ಹೆಚ್ಚಿಸಿದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

Related Articles

Leave a Reply

Your email address will not be published.

Back to top button