Latest
ಕಾಲುವೆಗೆ ಉರುಳಿದ ಕಾರು : ಸ್ಥಳದಲ್ಲೇ ನಾಲ್ವರ ಸಾವು, ಇಬ್ಬರಿಗೆ ಗಾಯ
ಬಾಗಲಕೋಟೆ: ಕಾರು ಪಲ್ಟಿಯಾಗಿ ಘಟಪ್ರಭಾ ಕಾಲುವೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಅಪಘಾತ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಮಹಾದೇವಗೌಡ (27), ಎರಿತಾತಾ (26), ವಿಜಯ್ (26), ಸುನೀಲ್ (24) ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಹಲಕಿ ಕ್ರಾಸ್ ಬಳಿ ತಡರಾತ್ರಿ ಘಟನೆ ನಡೆದಿದ್ದು. ಮುಧೋಳದಿಂದ ರಾಮದುರ್ಗದ ಕಡೆಗೆ ಕಾರಿನಲ್ಲಿ ಹೊರಟಿದ್ದರು. ಕಾರು ವೇಗದಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದಿದೆ. ಕ್ರೇನ್ ಮೂಲಕ ಕಾಲುವೆಗೆ ಬಿದ್ದಿದ್ದ ಕಾರು, ಮೃತದೇಹಗಳು ಹೊರಕ್ಕೆ ತೆಗೆದಿದ್ದು, ಮೃತರು ರಾಮದುರ್ಗ ತಾಲ್ಲೂಕಿನ ಗುಡ್ಡಮ್ಮನಾಳ, ಮುದೇನಕೊಪ್ಪ, ಬೀಡಕಿ, ಸುನ್ನಾಳ ಗ್ರಾಮದವರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ಗಾಯಾಳು ಲೋಕಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವ ಹೊರಕ್ಕೆ ತೆಗೆಯಲಾಗಿದೆ.