Latest

ಅ.24 ರಿಂದ ಒಂದು ವಾರ ಕನ್ನಡಕ್ಕಾಗಿ ನಾವು ಅಭಿಯಾನ : ಸಚಿವ ಸುನಿಲ್ ಕುಮಾರ್

ಬೆಂಗಳೂರು: 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಒಂದು ವಾರ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನವನ್ನು ರಾಜ್ಯಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. “ಮಾತಾಡ್ ಮಾತಾಡ್ ಕನ್ನಡ” ಎನ್ನುವ ಘೋಷ ವಾಕ್ಯದ ಅಡಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಅಭಿಯಾನದ ಹಿನ್ನೆಲೆಯಲ್ಲಿ ನಿರಂತರ ಕಾಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಗಳ ವಿವರ

ಅಕ್ಟೋಬರ್ 24 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಮೈಸೂರು ರಂಗಾಯಣದಿಂದ ಡಾ. ಎಸ್.ಎಲ್. ಬೈರಪ್ಪ ನವರ ʻಪರ್ವʼ ನಾಟಕ ಪ್ರದರ್ಶನವಾಗಲಿದೆ. ಬೆಂಗಳೂರು ನಾಟಕ ಅಕಾಡಮಿ ಯವರಿಂದ ಜಾಲಹಳ್ಳಿಯ ಬಿ.ಇ.ಎಲ್ ರಂಗಮಂದಿರದಲ್ಲಿ ರಂಗ ಪಯಣ ಪ್ರಸ್ತುತ ಪಡಿಸುವ ʻಗುಲಾಬಿ ಗ್ಯಾಂಗ್ʼ ನಾಟಕ ನಡೆಯಲಿದೆ.

ಅಕ್ಟೋಬರ್ 25 ರಂದು ಸಂಜೆ 5ಗಂಟೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿʻ ಮೂಕನ ಮಕ್ಕಳುʼ ನಾಟಕ ಪ್ರದರ್ಶನವಾಗಲಿದೆ. ಮಲ್ಲೇಶ್ವರಂನ ಎಮ್.ಇ.ಎಸ್ ಕಾಲೇಜ್ ಸಭಾಭವನದಲ್ಲಿ ದೃಶ್ಯಕಾವ್ಯ ಪ್ರಸ್ತುತ ಪಡಿಸುವ ʻಮಾಯಾಬೇಟೆʼ ನಾಟಕ ಪ್ರದರ್ಶನವಾಗಲಿದೆ.

ಅಕ್ಟೋಬರ್ 26 ಸಂಜೆ 6.30ಕ್ಕೆ ರಂದು ಶಿವಮೊಗ್ಗ ರಂಗಾಯಣದವರಿಂದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ʻಚಾಣಕ್ಯ ಪ್ರಪಂಚʼ, ದಾವಣಗೆರೆ ವೃತಿ ರಂಗಾಯಣದಿಂದ ಸಂಜೆ 6.30ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ʻರಾಶಿ ಚಕ್ರʼ , ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಸ್ತುತ ಪಡಿಸುವ ʻಶಿವರಾತ್ರಿʼ ನಾಟಕ ಹಾಗೂ ಮೈಸೂರು ರಂಗಾಯಣದಿಂದ ಪೀಣ್ಯದ ಬಿ.ಇ.ಎಲ್ ನಲ್ಲಿ ʻಮೂಕನ ಮಕ್ಕಳುʼ ನಾಟಕ ಪ್ರದರ್ಶನ ಗೊಳ್ಳಲಿದೆ.

ಅಕ್ಟೋಬರ್ 27 ರಂದು ಸಂಜೆ 6.30ಕ್ಕೆ ಮೈಸೂರು ರಂಗಾಯಣದಿಂದ ಬೆಂಗಳೂರಿನ ಕಲ್ಯಾಣ ನಗರದ ಡಾ. ಶಿವಕುಮಾರಸ್ವಾಮಿ ಜ್ಞಾನಸೌಧದಲ್ಲಿ ʻಮೂಕನ ಮಕ್ಕಳುʼ, ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ದಾವಣಗೆರೆ ವೃತಿ ರಂಗಾಯಣದವರಿಂದ ʻಕನ್ನಡ ಕಲಿಯೋಣ ಬಾʼ ನಾಟಕ, ಧಾರವಾಡ ರಂಗಾಯಣದವರಿಂದ ಮಲ್ಲೇಶ್ವರಂ ಕುವೆಂಪು ಸಭಾಂಗಣದಲ್ಲಿ ʻಕತ್ತಲೆಯ ಕೊರೊನಾʼ ನಾಟಕ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಮೆಜೆಸ್ಟಿಕ್ ಆರ್.ಎಂ.ಎಸ್. ಕನ್ನಡ ಸಂಘದಲ್ಲಿ ಮಹದೇವಯ್ಯ ತಂಡ ದವರಿಂದ ಸುಗಮ ಸಂಗೀತ ಕಾಯಕ್ರಮ ನಡೆಯಲಿದೆ.

ಅಕ್ಟೋಬರ್ 28 ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಕುರುಬಾರಹಳ್ಳಿಯ ರಾಜ್ಕುಮಾರ ಸಭಾಂಗಣದಲ್ಲಿ ʻಕತ್ತಲೆ ಕರೊನಾʼ ನಾಟಕ, ಸುಚಿತ್ರ ಫಿಲಂ ಸೋಸೈಟಿಯಲ್ಲಿ ʻಶ್ರದ್ಧ ಮತ್ತು ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳುʼ ನಾಟಕ, ಕಲಬುರಗಿ ರಂಗಾಯಣ ದವರಿಂದ ಆರ್ಪಿಸಿ ಬಡಾವಣೆಯ ಗ್ರಂಥಾಲಯ ಸಭಾಗಂಣದಲ್ಲಿ ಸಿರಿ ಪುರಂದರ ನಾಟಕ ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ರಾಜಾಜಿನಗರದ ಬಾಲಮೋಹನ ವಿದ್ಯಾಲಯದಲ್ಲಿ ಹೆಚ್.ಎನ್.ಮೀರಾ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 29 ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಬ್ಯಾಟರಾಯನಪುರ ನಗರಸಭಾ ಸಭಾಂಗಣದಲ್ಲಿ ʻಕತ್ತಲೆ ಕರೊನಾʼ ನಾಟಕ, ಕಲಬುರಗಿ ರಂಗಾಯಣದಿಂದ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಸಿರಿ ಪುರಂದರ ನಾಟಕಗಳು ನಡೆಯಲಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ವಿಜಯನಗರದ ಕರ್ನಾಟಕ ವಿದ್ಯುತ್ ಕಾರ್ಖಾನೆ ಸಂಘದಲ್ಲಿ ʻಸವಿಗಾನ ಲಹರಿʼ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 30 ರಂದು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರಿಂದ ಕಾಮಾಕ್ಷಿಪಾಳ್ಯದ ರಾಘವೇಂದ್ರ ಆಡಿಟೋರಿಯಂ ನಲ್ಲಿ ʻಕಾನಿನ ಪೌರಾಣಿಕʼ ನಾಟಕ ಪ್ರದರ್ಶನವಾಗಲಿದ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಕುಮಾರಸ್ವಾಮಿ ಲೇಔಟ್ನ ಕೇಂದ್ರ ಗಂಥಾಲಯದಲ್ಲಿ ʻ ಕನ್ನಡ ಗೀತೆಗಳುʼ ಎನ್ನುವ ಸಂಗೀತ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ 31 ರಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಮಲ್ಲೇಶ್ವರಂನ ಸೇವಾಸದನದಲ್ಲಿ ʻಕನ್ನಡ ಗೀತೆಗಳಿಗೆ ನೃತ್ಯʼ ಕಾಯಕ್ರಮ ನಡೆಯಲಿದೆ.

ಈ ಎಲ್ಲ ಕಾಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕನ್ನಡದ ಈ ಕೈಂಕರ್ಯದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಸಚಿವ ಸುನಿಲ್ ಕುಮಾರ್ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published.

Back to top button