Latest
ಮೋಹನ್ ಭಾಗ್ವತ್ ಬಡ ವರ್ಗದ ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಮಾತನಾಡಲಾರರು: ಸುಧೀಂದ್ರ ಭಡೋರಿಯಾ
ನವದೆಹಲಿ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ದೇಶದ ಬಡವರ್ಗದ ನೈಜ ಸಮಸ್ಯೆಗಳ ಕುರಿತಾಗಿ ಕಿಂಚಿತ್ತೂ ಮಾತನಾಡಲು ಬಯಸುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ವಕ್ತಾರ ಸುಧೀಂದ್ರ ಭಡೋರಿಯಾ ವಾಗ್ದಾಳಿ ನಡೆಸಿದ್ದಾರೆ.
ವಿಜಯದಶಮಿಯ ಪ್ರಯುಕ್ತ ಮೋಹನ್ ಭಾಗ್ವತ್ ತಮ್ಮ ಭಾಷಣದಲ್ಲಿ ದೇಶದ ಜನಸಂಖ್ಯೆಯ ಅಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿ, ರಾಷ್ಟ್ರದ ಜನಸಂಖ್ಯಾ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದಕ್ಕೆ ಸುಧೀಂದ್ರ ಭಡೋರಿಯಾ ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ಅಸಮಾನತೆ ಹೆಚ್ಚಾಗಿದೆ. ಬಡತನ ತಾಂಡವವಾಡುತ್ತಿದೆ. ಅಪೌಷ್ಠಿಕತೆಯಿದೆ. ಇಂತಹ ಸಮಸ್ಯೆಗಳ ಬಗ್ಗೆ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆಯಾಗಲೀ ಮಾತನಾಡದೆ ಬೇರೆ ವಿಷಯದತ್ತ ಕೇಂದ್ರೀಕರಿಸುತ್ತಾರೆ. ಬಿಜೆಪಿ ಸರ್ಕಾರ ಮತ್ತು ಸಂಘ ಕೂಡ ಅದೇ ಹಾದಿಯಲ್ಲಿದೆ ಹೊರತು ದೇಶದ ಉನ್ನತಿಗೆ ಶ್ರಮಿಸುವಂತಹ ಇಚ್ಛಾಶಕ್ತಿ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.