Latest

ಉತ್ತರ ಕನ್ನಡ: ಕುಮಟಾದಲ್ಲಿ ಬಾಂಬ್ ರೂಪದ ವಸ್ತು ಪತ್ತೆ !

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್ ಹಿಂಬದಿಯಲ್ಲಿ ಸಿಲೆಂಡರ್ ನೊಂದಿಗೆ ವೈಯರ್ ಸುತ್ತಿದ ಮಾದರಿಯಲ್ಲಿ ಬಾಂಬ್ ರೂಪದ ವಸ್ತು ಪತ್ತೆಯಾಗಿದೆ. ಬುಧವಾರ ಸಂಜೆ ಸ್ಥಳೀಯರು ವಾಯು ವಿಹಾರ ಮಾಡುವಾಗ ಈ ಬಾಂಬ್ ಮಾದರಿ ವಸ್ತುವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಬಾಂಬ್ ಗೆ ಅಳವಡಿಸುವ ಸಿಲೆಂಡರ್, ಡಿಟೋನೇಟರ್, ತಂತಿರೂಪದ ವಸ್ತುಗಳಿದ್ದು, ಪೊಲೀಸರಿಗೂ ಈ ವಸ್ತುವಿನ ಮೇಲೆ ಅನುಮಾನ ಬಂದಿದೆ. ಮಂಗಳೂರಿನ ಬಾಂಬ್ ನಿಷ್ಕ್ರಿಯದಳದವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳದವರು ಬೀಡು ಬಿಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಪೊಲೀಸರ ಮಾಹಿತಿ ಪ್ರಕಾರ ಸಿಲೆಂಡರ್, ಬ್ಯಾಟರಿ ಷೆಲ್ ಗಳು ಇದರಲ್ಲಿ ಇದ್ದು, ಇದು ನಕಲಿ ಬಾಂಬ್ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ ಈ ವಸ್ತುಗಳು ಸಿಕ್ಕ ಪ್ರದೇಶದಲ್ಲಿ ರೈಲ್ವೆ ನಿಲ್ದಾಣ ಹತ್ತಿರದಲ್ಲಿದೆ. ಇದರಿಂದ ಪೊಲೀಸರಿಗೆ ಇನ್ನಷ್ಟು ಅನುಮಾನ ಮೂಡಲು ಕಾರಣವಾಗಿದೆ.

ಪತ್ತೆಯಾದ ಬಾಂಬ್ ಮಾದರಿ ವಸ್ತು ನಿಷ್ಕ್ರೀಯ:

ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳದವರು ತಪಾಸಣೆ ನಡೆಸಿ ವಸ್ತುವನ್ನು ನಿಷ್ಕ್ರೀಯಗೊಳಿಸಿದ್ದಾರೆ‌. ಬಾಂಬ್ ಮಾದರಿ ವಸ್ತುವಿನಲ್ಲಿ ಪೈಪ್ ಗಳು ಪೇಪರ್ ತುಂಡುಗಳು, ವಯರ್ ಗಳನ್ನು ಸುತ್ತಿ ಅದಕ್ಕೆ ಷೆಲ್ ಗಳನ್ನು ಕನೆಕ್ಟ್ ಮಾಡಲಾಗಿತ್ತು. ಅದರ ಜೊತೆಗೆ ಸರ್ಕೀಟ್ ಬೋರ್ಡ್ ಅನ್ನು ಹಾಕಿ ಬಾಂಬ್ ಮಾದರಿ ತಯಾರು ಮಾಡಿ ಇಡಲಾಗಿತ್ತು.

ಸದ್ಯ ಬಾಂಬ್ ಎಂಬ ಆತಂಕ ದೂರವಾಗಿದೆ. ಕಾಲೇಜು ವಿದ್ಯಾರ್ಥಿಗಳು ಈ ರೀತಿ ಬಾಂಬ್ ತಯಾರಿ ಮಾಡಿ ಇಟ್ಟಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರೆದಿದೆ.

Related Articles

Leave a Reply

Your email address will not be published.

Back to top button