Latest

ಸಿದ್ದರಾಮಯ್ಯ ತಮ್ಮ ಸರ್ಕಾರ ಇದ್ದಾಗ 3 ಸಾವಿರ ರೈತರು ಆತ್ಮಹತ್ಯೆಗೆ ಮಾಡಿಕೊಂಡಿದ್ದನ್ನು ಮರೆತ್ತಿದ್ದಾರೆ: ಕಟೀಲ್

ಧಾರವಾಡ: ಈಗ ಸಿದ್ದರಾಮಯ್ಯ ಅವರು ಉತ್ತರ ಪ್ರದೇಶ ಘಟನೆಗೆ ಬಿಜೆಪಿ ಕೊಲೆಗಡುಕ ಸರ್ಕಾರ ಎಂದು ಹೇಳುತ್ತಿದ್ದಾರೆ. ಆದರೆ ಈ ಹಿಂದೆ ರಾಜ್ಯದಲ್ಲಿ ಅವರ ನೇತೃತ್ವದ ಸರ್ಕಾರ ಇದ್ದಾಗ 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದನ್ನು ಅವರು ಪಾಪ ಮರೆತು ಬಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಇದ್ದಾಗ, ಗೋ ಹತ್ಯೆ ನಿಷೇಧ ಆಗಬೇಕು ಎಂದು ಸಾಧು ಸಂತರು ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತಿದ್ದರು.‌ ಅಂದು‌ ಅಲ್ಲಿ‌ ಪ್ರತಿಭಟನೆ ನಡೆಸುತ್ತಿದ್ದ ಹಲವು ಸಾಧು ಸಂತರನ್ನು ಗುಡಿಕ್ಕಿ ಹತ್ಯೆ ಮಾಡಲಾಯಿತು. ಅದನ್ನು ಈಗ‌ ಸಿದ್ರಾಮಣ್ಣಾ ಮರೆತು ಬಿಟ್ಟಿದ್ದಾರೆ. ಕೊಲೆಗಡುಕರ ಸರ್ಕಾರ ಅವರದ್ದಾಗಿದ್ದವು, ನಮ್ಮ ಬಿಜೆಪಿ ನೇತೃತ್ವದ ಸರ್ಕಾರಗಳಲ್ಲ ಎಂದು ವಾಗ್ದಾಳಿ ನಡೆಸಿದರು.

ಉಪ ಚುನಾವಣೆ ವಿಚಾರದಲ್ಲಿ ಯಾವುದೇ ಕಿತ್ತಾಟವಿಲ್ಲ:

ರಾಜ್ಯದಲ್ಲಿ ನಡೆಯುತ್ತಿರು ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ವಿಚಾರವಾಗಿ ಬಿಜೆಪಿ ಪಕ್ಷದಲ್ಲಿ ಯಾವುದೆ ಕಿತ್ತಾಟವಿಲ್ಲ. ಕಳೆದ ದಿನ ಉಪ ಚುನಾವಣೆ ಉಸ್ತುವಾರಿ ಕುರಿತಂತೆ ಕಳೆದ ದಿನ ಒಂದು ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಇನ್ನೂ ಕೆಲವರನ್ನು ಸೇರಿಸಬೇಕಿದೆ. ಬಿ ವೈ ವಿಜೆಯೇಂದ್ರರವರು ರಾಜ್ಯ ಬುಜೆಪಿ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯದ ಒ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಯಾರನ್ನು ಎಲ್ಲೇಲಿ ಹಾಕಬೇಕು ಎಂಬುವುದರ ಕುರಿತು ಚರ್ಚೆಯನ್ನು ಮಾಡಲಾಗುತ್ತಿದೆ. ಕಳೆದ ದಿನ ಹಾಗೂ ಇಂದು ಮತ್ತೆ ಇನ್ನೆರಡು ದಿನ ಬಿಟ್ಟು ಮತ್ತೊಂದು ಲಿಸ್ಟ್‌ಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಭಾರತ ಮೇಳದ ಮೂಲಕ ಕೇಂದ್ರ-ರಾಜ್ಯ ಸರ್ಕಾರ ಯೋಜನೆಗಳನ್ನು ಜನಕ್ಕೆ ತಲುಪಿಸಲಾಗುತ್ತಿದೆ:

ದೇಶದಲ್ಲಿ ಕಳೆದ ಏಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಜನ ಪರ ಯೋಜನೆಗಳನ್ನು ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೈಗೊಂಡ ಯೋಜನೆಗಳನ್ನು ಭಾರತ ಮೇಳದ ಮೂಲಕ‌ ಜನ ಸಾಮನ್ಯರಿಗೆ ತಲುಪಿಸುವ ಕಾರ್ಯವನ್ನು ಎಲ್ಲ ಕಡೆಯಲು ಮಾಡುತ್ತಿದ್ದೇವೆ. ಅದನ್ನು ಹುಬ್ಬಳ್ಳಿ-ಧಾರವಾಡ ಮಾಹಾನಗರ ಬಿಜೆಪಿ ಘಟಕ ತುಂಬಾ ಅದ್ಭುತವಾಗಿ ಮಾಡಿದೆ. ಹಾಗಾಗಿ ಹುಬ್ಬಳ್ಳಿ ಧಾರವಾಡ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಏಳು ವರ್ಷಗಳ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ, ಜನ ಜಾಗೃತಿಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button