Latest

ಜೆಡಿಎಸ್‌ನವರದು ಕಾಮಾಲೆ ಕಣ್ಣು, ಅವರಿಗೆ ಕಾಣೋದೆಲ್ಲಾ ಹಳದಿ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಧಾರವಾಡ : ಜೆಡಿಎಸ್ ನವರು ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದವರು. ಜೀವನ ಪೂರ್ತಿ ತಂದೆ-ಮಕ್ಕಳು ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕುಟುಂಬ ರಾಜಕಾರಣದ ಹಳದಿ ರೋಗ ಬಂದವರಿಗೆ, ಎಲ್ಲವೂ ಹಳದಿಯಾಗಿಯೇ ಕಾಣಿಸುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು ಕುಮಾರಸ್ವಾಮಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಕೆಪಿಎಸ್​ಸಿ ಯಿಂದ ಹಿಡಿದು, ಒಂದು ಇಲಾಖೆಯ ಗುಮಾಸ್ತನವರೆಗೂ ಕುಟುಂಬದವರನ್ನು ಇರಬೇಕು ಎನ್ನವ ಮನಸ್ಥಿತಿ ಹೊಂದಿದವರು. ಮೊದಲು ಕುಮಾರಸ್ವಾಮಿ ಆರ್.ಎಸ್.ಎಸ್ ಶಾಖೆಗೆ ಬರಬೇಕು. ಅವರಿಗೆ ಈಗಾಗಲೇ ಶಾಖೆಗೆ ಬರುವಂತೆ ಕರೆ ಕೊಟ್ಟಿದ್ದೇನೆ.‌ ಎರಡು ದಿನ ಶಾಖೆಗೆ ಬರಲಿ, ಶಾಖೆ ಎಂದರೆ ಏನು?, ಅದು ಏನು ಕಲಿಸುತ್ತದೆ ಎಂಬುದನ್ನು ಅರಿಯಲಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾರತವಲ್ಲದೇ ಪ್ರಪಂಚದ 150 ದೇಶದಲ್ಲಿ ಸೇವಾ ಕಾರ್ಯ ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜಾಗೃತಿ ಮೂಡಿಸುತ್ತಿದೆ ಅಷ್ಟೇ ಅಲ್ಲದೆ ದೇಶ ಭಕ್ತಿ ಹುಟ್ಟಿಸುತ್ತದೆ ಎಂದು‌ ಟಾಂಗ್ ನೀಡಿದರು.

ಉಪ ಚುನಾವಣೆಗಳಲ್ಲಿ ಯಡಿಯೂರಪ್ಪನವರು ಭಾಗವಹಿಸುತ್ತಾರೆ:

ಇನ್ನೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದ್ದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪನವರು ನಮ್ಮೆಲ್ಲರ ಸರ್ವಶ್ರೇಷ್ಠ ನಾಯಕರಾಗಿದ್ದಾರೆ. ಬಿ.ಎಸ್.ವೈ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಉಪ ಚುನಾವಣೆಯ ಎರಡು ಕ್ಷೇತ್ರಗಳಲ್ಲಿ ಭಾಗಿಯಾಗುತ್ತಾರೆ. ಎರಡು ದಿನ ಹಾನಗಲ್ ಪ್ರಚಾರ ಹಾಗೂ ಎರಡು ದಿನ ಸಿಂಧಗಿಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಎರಡು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲ್ಲುತ್ತಾರೆ

ಮುಂಬರು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಇಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಹಾನಗಲ್ ಮತ್ತು ಸಿಂದಗಿ ಕ್ಷೇತ್ರದ ಪ್ರಚಾರದಲ್ಲಿ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಜೊತೆ ನಾನು ಕೂಡ ಇಂದು ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೆನೆ. ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button