Latest

ಹಾನಗಲ್ ಸೋತಿದ್ದಕ್ಕೆ ನಾವು ಇವಿಎಂ ಮೇಲೆ ದೂರುವುದಿಲ್ಲ: ಸಿ ಟಿ ರವಿ ಲೇವಡಿ

ಚಿಕ್ಕಮಗಳೂರು: ಉಪ ಚುನಾವಣೆಯಲ್ಲಿ ಮತದಾರರಿಂದ ಮಿಶ್ರ ಪ್ರತಿಕ್ರಿಯೆ ಹೊರಬಿದ್ದಿದೆ. ಜನತೆಯ ತೀರ್ಪನ್ನು ಒಪ್ಪುತ್ತೇವೆ. ಆದರೆ ಇವಿಎಂ ಮೇಲೆ ಆರೋಪ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ ಟಿ ರವಿ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಒಂದುವೇಳೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೆ ವಿಪಕ್ಷಗಳು ಇವಿಎಂ ಮೇಲೆ ಆರೋಪ ಮಾಡುತ್ತಿದ್ದರು. ಆದರೆ ನಾವು ಹಾಗೆ ಮಾಡುವುದಿಲ್ಲ. ಜನಾದೇಶವನ್ನು ಸ್ವೀಕರಿಸುತ್ತೇವೆ ಎಂದರು.

ಸಿಂದಗಿಯಲ್ಲಿ 31 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಹಾನಗಲ್ನಲ್ಲಿ ವಿರೋಚಿತ ಹೋರಾಟ ನಡೆಸಿದ್ದೇವೆ. ಒಂದು ಕಡೆ ಭರ್ಜರಿ ಜಯ ಸಿಕ್ಕರೆ, ಇನ್ನೊಂದೆಡೆ ನಿರೀಕ್ಷೆಯಂತೆ ಗೆಲುವು ಸಾಧ್ಯವಾಗಿಲ್ಲ. ನಾವು ಎಲ್ಲಿ ಎಡವಿದ್ದೇವೆಂದು ಅವಲೋಕನ ನಡೆಸಿ, ಮುಂದೆ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಇದು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವಿರುದ್ಧ ಜನಾದೇಶವಲ್ಲ ಎಂದಿದ್ದಾರೆ.

ಜೆಡಿಎಸ್ ಸಂಘಟನೆ, ಐಡಿಯಾಲಜಿ ಹಾಗೂ ನೇತೃತ್ವ ಇಲ್ಲದಾಗ ಏನು ಆಗಬೇಕಿತ್ತೋ ಹಾಗೆಯೇ ಆಗಿದೆ. ಈ ಬಗ್ಗೆ ಜೆಡಿಎಸ್ ನಾಯಕರು ಯೋಚನೆ ಮಾಡಬೇಕು ಎಂದರು.

Related Articles

Leave a Reply

Your email address will not be published. Required fields are marked *

Back to top button