Latest

ಯಾರನ್ನು ಮೆಚ್ಚಿಸಲು ಐಟಿ ದಾಳಿ ರಾಜಕೀಯ ಎನ್ನುತ್ತೀರಿ: ಸಿದ್ದರಾಮಯ್ಯ, ಹೆಚ್​​ಡಿಕೆ ವಿರುದ್ದ ವಿಶ್ವನಾಥ್ ಕಿಡಿ

ಮೈಸೂರು: ಯಾರನ್ನು ಮೆಚ್ಚಿಸಲು ಐಟಿ ದಾಳಿ ಸಂಬಂಧ ರಾಜಕೀಯ ವಾಸನೆ ಆರೋಪವಿದೆ ಎಂದು ಹೇಳುತ್ತಿದ್ದೀರಿ. ವೀರಶೈವ ಸಮುದಾಯ ಪ್ರಜ್ಞಾವಂತ ಸಮಾಜ ಎಂದು ವಿಧಾನ ಪರಿಷತ್​​ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ವೀರಶೈವರನ್ನು ದಡ್ಡರು ಅಂದುಕೊಂಡರೆ ನಿಮ್ಮಂತಹ ದಡ್ಡರು ಯಾರು ಇಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಷ್ಟು ದಡ್ಡರು ಯಾರು ಇಲ್ಲ ಯಡಿಯೂರಪ್ಪ ಅವರೇ ಇದನ್ನು ಸ್ವಾಗತ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ನಿಮ್ಮಿಬ್ಬರ ಕೊಸರು ಏನು..? ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅಂದಿದ್ದಾರೆ. ಅಂದ ಮೇಲೆ ರಾಜಕೀಯ ವಾಸನೆ ಏನು. ಜನ ನಗದೇ ಏನು ಮಾಡುತ್ತಾರೆ. ಇಂತಹ ಬೂಟಾಟಿಕೆ ಹೇಳಿಕೆ ಬಗ್ಗೆ ಜನ ನಗುತ್ತಾರೆ ಹೇಳಿಕೆ ಕೊಡುವಾಗ ಎಚ್ಚರ ವಹಿಸಿ. ಐಟಿ, ಇಡಿ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದರು.

ರಾಷ್ಟ್ರ ರಾಜಕಾರಣ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಚ್‌.ವಿಶ್ವನಾಥ್‌ ಮತ್ತೆ ಕಿಡಿಕಾರಿದರು. ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುಕ್ಕಲುತನವಿದೆ ಎಂದು ಲೇವಡಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಅವರು ಕರೆದು ಮಾತನಾಡಿಸಿದಾಗ, ರಾಷ್ಟ್ರ ರಾಜಕಾರಣಕ್ಕೆ ಬರುವೆ. ನನ್ನನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ ಎಂದು ಹೇಳುವ ಧೈರ್ಯವನ್ನು ಸಿದ್ದರಾಮಯ್ಯ ಅವರು ತೋರಬೇಕು ಎಂದರು.

ಕನ್ನಡಿಗರೊಬ್ಬರು ಪ್ರಧಾನಿ ಅಭ್ಯರ್ಥಿಯಾಗುವುದು ಹೆಮ್ಮೆಯ ವಿಷಯವಲ್ಲವೇ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದರು.

Related Articles

Leave a Reply

Your email address will not be published.

Back to top button