Latest

ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣಗೆ ಆಹ್ವಾನ ನೀಡಿರುವುದು ಸ್ವಾಗತಾರ್ಹ: ಹೆಚ್.ವಿಶ್ವನಾಥ್

ಮೈಸೂರು : ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರಿಗೆ ಆಹ್ವಾನಿಸಿರುವುದು ಸಾಂಸ್ಕೃತಿಕ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿಗೆ ಸ್ವಾಗತಾರ್ಹ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ರಾಜಕಾರಣದ ಬಗ್ಗೆ ಇದ್ದ ತಾತ್ಸರದ ಮನೋಭಾವ ದೂರ ಮಾಡುವ ನಿಟ್ಟಿನಲ್ಲಿ ಇದೊಂದು ಸೂಕ್ತ ತೀರ್ಮಾನ. ಇದುವರೆಗೂ ಸಾಹಿತಿ, ವಿಜ್ಞಾನಿಗಳು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಉದ್ಘಾಟಿಸಿದ್ದರು, ರಾಜಕೀಯ ಕ್ಷೇತ್ರದ ಎಸ್‌.ಎಂ. ಕೃಷ್ಣ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದರು.

ಎಸ್‌‌.ಎಂ‌.ಕೃಷ್ಣ ಅವರು ಹಿರಿಯ ರಾಜಕಾರಣಿಗಳು, ಜನಾದೇಶ ಪಾಲಿಸಿ ಆಡಳಿತ ನಡೆಸಿದವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಬೊಮ್ಮಾಯಿ ಸರ್ಕಾರ ಎಲ್ಲಾ ವಿಚಾರಗಳಲ್ಲೂ ಹೈಕ್ಲಾಸ್ ಆಗಿ ಸಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಹೆಚ್ ವಿಶ್ವನಾಥ್ ಶಹಬ್ಬಾಸ್ ಗಿರಿ ವ್ಯಕ್ತಪಡಿಸಿದರು.

ಎಸ್ ಎಂ ಕೃಷ್ಷರವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸತತ ಮೂರು ವರ್ಷ ಬರಗಾಲ ಎದುರಾಯಿತು. ಡಾ.ರಾಜಕುಮಾರ್ ರನ್ನು ವೀರಪ್ಪನ್ ಅಪಹರಿಸಿದ, ಮಾಜಿ ಸಚಿವ ನಾಗಪ್ಪನವರ ಹತ್ಯೆಯಾಯಿತು. ಇಂತಹ ಹಲವು ಸಮಸ್ಯೆಗಳ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್ ಎಂ ಕೃಷ್ಣ ಶ್ರಮಿಸಿದ್ದಾರೆ.

ಅವರ ಕಾಲದಲ್ಲಿ ಐಟಿಬಿಟಿ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಯಿತು. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಜಾಗತಿಕವಾಗಿ ಗುರ್ತಿಸಿಕೊಳ್ಳುವಂತಾಯಿತು. ಶಿಸ್ತು ಸಂಯಮಕ್ಕೆ ಹೆಸರಾಗಿರುವ ಕೃಷ್ಣರವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ದಸರಾಕ್ಕಿರುವ ಮಹತ್ವದಷ್ಟೇ ಕೃಷ್ಣರವರ ಮಹತ್ವವನ್ನು ಸಾರುತ್ತಿದೆ ಎಂದರು.

Related Articles

Leave a Reply

Your email address will not be published.

Back to top button