Latest
ತ್ರಿಪುರಾ: ಮಾಧ್ಯಮ ಕಚೇರಿಗಳ ಮೇಲೆ ದಾಳಿ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಬಂಧನ
ಅಗರ್ತಲಾ: ಮಾಧ್ಯಮ ಸಂಸ್ಥೆಗಳ ಮೇಲೆ ಸೆ.8ರಂದು ಅಗರ್ತಲಾದಲ್ಲಿ ದಾಳಿ ನಡೆಸಿರುವ ಪ್ರಕರಣದಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯ ಸಹವಕ್ತಾರ ರಾಘು ಲೋದ್ ಎಂಬಾತನನ್ನು ಬಂಧಿಸಲಾಗಿದೆ.
ದೇಶೆರ್ ಕಥಾ, ದುರಂತ ಟಿವಿ, ಪ್ರತಿಬದಿ ಕಲಂ ಹಾಗೂ ಸುದ್ದಿಜಾಲ ಪಿಬಿ24, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಭಾರತೀಯ ದಂಡ ಸಂಹಿತೆ 447, 448, 427 ಇತ್ಯಾದಿ ಸೆಕ್ಷನ್ ಗಳ ಅಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಅಗರ್ತಲಾದಲ್ಲಿ ಮೂರು ಮಾಧ್ಯಮ ಕಚೇರಿಗಳು ಹಾಗೂ ಸಿಪಿಐಎಂ ಕಚೇರಿಗೆ ದಾಳಿ ನಡೆಸಿದ ನಂತರ ತ್ರಿಪುರಾದ ಅನೇಕ ಭಾಗದಲ್ಲಿ ಭುಗಿಲೆದ್ದ ಹಿಂಸೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಆರೋಪಿಗಳು ಬಿಜೆಪಿ ಕಾರ್ಯಕರ್ತರು ಎಂದು ತಿಳಿಯಲಾಗಿದೆ.