Latest
ಹಾನಗಲ್ ನಲ್ಲಿ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು – ಕಾಂಗ್ರೆಸ್ ಗೆ ಮರುಭೂಮಿಯಲ್ಲಿ ಒಯಾಸಿಸ್ : ಬಿಜೆಪಿ ಲೇವಡಿ
ಬೆಂಗಳೂರು: ಹಾನಗಲ್ ಕ್ಷೇತ್ರದ “ವೈಯಕ್ತಿಕ ವರ್ಚಸ್ಸಿನ” ಒಂದು ಗೆಲುವು ಕಾಂಗ್ರೆಸ್ ನಾಯಕರಿಗೆ ಮರುಭೂಮಿಯಲ್ಲಿ ಒಯಸಿಸ್ ಲಭಿಸಿದ ಹಾಗಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ದೇಶವ್ಯಾಪಿ ನಡೆದ ಉಪಚುನಾವಣೆಗಳ ಫಲಿತಾಂಶದ ಅವಲೋಕನ ಮಾಡಿದಾಗ “ಎದ್ದಿರುವುದು ಕಾಂಗ್ರೆಸ್ ಪರವಾದ ಅಲೆಯಲ್ಲ, ಕಾಂಗ್ರೆಸ್ ಮುಕ್ತ ಭಾರತ ಅಭಿಯಾನ”ಎಂದು ಹೇಳಿದೆ.
ದೇಶದಲ್ಲಿ ಎನ್ಡಿಎ 15 ಸ್ಥಾನಗಳನ್ನು ಗಳಿಸಿದ್ದರೆ, ಯುಪಿಎ – 08 ಸ್ಥಾನಗಳಿಸಿದ್ದು ಮೂರು ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಬಿಜೆಪಿ ಟ್ವೀಟ್ನಲ್ಲಿ ತಿಳಿಸಿದೆ.
ಇನ್ನೊಂದು ಟ್ವೀಟ್ ನಲ್ಲಿ ವೈಯುಕ್ತಿಕ ವರ್ಚಸ್ಸಿನ ಆಧಾರದಲ್ಲಿ ಗೆದ್ದ ಒಂದು ಕ್ಷೇತ್ರದ ಗೆಲುವನ್ನು ನೆಪವಾಗಿರಿಸಿಕೊಂಡು,ದೇಶಾದ್ಯಂತ ಬದಲಾವಣೆಯ ಗಾಳಿ ಬೀಸುತ್ತಿದೆ, ಕಾಂಗ್ರೆಸ್ ಪರವಾದ ಅಲೆ ಎದ್ದಿದೆ
ಎಂದು ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರು, ದೇಶವ್ಯಾಪಿ ನಡೆದ ಉಪಚುನಾವಣೆಗಳ ಫಲಿತಾಂಶ ಬಿಜೆಪಿ ಹಾಗೂ ಅಂಗಪಕ್ಷಗಳ ಪರವೇ ಇದೆ ಎಂಬುದನ್ನು ಗಮನಿಸಬೇಕಿದೆ ಎಂದಿದೆ.