Latest

Byadrahalli Suicide: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಮಾಲೀಕ ಹಲ್ಲೆಗೆರೆ ಶಂಕರ್ ಬಂಧನ

ಬೆಂಗಳೂರು : ನಗರದದಲ್ಲಿ ಐವರು ಆತ್ಮಹತ್ಯೆ ಪ್ರಕರಣ ಸಂಬಂಧ, ತನಿಖೆ ನಡೆಸುತ್ತಿರುವ ಪೊಲೀಸರು, ಮನೆಯ ಮಾಲೀಕ ಹಲ್ಲೆಗೆರೆ ಶಂಕರ್ ಅವರನ್ನು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆಗೆರೆ ಶಂಕರ್ ಪುತ್ರಿಯರು, ಮಗ ಬರೆದಿಟ್ಟಿದ್ದಂತ ಪುಟಗಟ್ಟಲೇ ಡೆತ್ ನೋಟ್ ಆಧಾರದ ಮೇಲೆ, ಪೊಲೀಸರು ಹಲ್ಲೆಗೆರೆ ಶಂಕರ್ ಅವರನ್ನು ಬಂಧಿಸಲಾಗಿದೆ. ಕುಟುಂಬದ ಸದಸ್ಯರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ ಅಡಿಯಲ್ಲಿ ಶಂಕರ್ ಅವರನ್ನು ವಶಕ್ಕೆ ಬ್ಯಾಡರಹಳ್ಳಿ ಪೊಲೀಸರು ಪಡೆದಿದ್ದಾರೆ.

ಕಳೆದ ತಿಂಗಳು ಬ್ಯಾಡರಹಳ್ಳಿಯಲ್ಲಿ ಶಂಕರ್ ಅವರ ಮನೆಯಲ್ಲಿ ಪತ್ನಿ ಭಾರತಿ, ಹೆಣ್ಣುಮಕ್ಕಳಾದ ಸಿಂಚನಾ, ಸಿಂಧೂರಾಣಿ ಹಾಗೂ ಮಗ ಮಧು ಸಾಗರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಧೂರಾಣಿ 9 ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದಿದ್ದರು. ಹೀಗೆ ಐವರು ಸಾವನ್ನಪ್ಪಿದ್ದರು. ಡೆತ್ ನೋಟ್ ನಲ್ಲಿ ತಮ್ಮ ತಂದೆಯ ಬಗ್ಗೆ ಆರೋಪಿಸಿದ್ದರು.

Related Articles

Leave a Reply

Your email address will not be published.

Back to top button