ಮೌಲ್ಯಾಧಾರಿತ ರಾಜಕಾರಣ ಮಾಡಬೇಕಾದದ್ದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ: ಹೊರಟ್ಟಿ
ಧಾರವಾಡ: ರಾಜಕೀಯ ಜೀವನದಲ್ಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಯಾರೊಬ್ಬರೂ ರಾಜಕಾರಣಿ ಟೀಕೆ ಟಿಪ್ಪಣಿಗಳನ್ನು ಮಾಡಬಾರದು. ಅದೂ ಸರಿಯು ಕೂಡಾ ಅಲ್ಲ. ರಾಜ್ಯದಲ್ಲಿರುವ ಮೂರು ರಾಜಕೀಯ ಪಕ್ಷದವರು ಪರಸ್ಪರ ವೈಯಕ್ತಿಕ ಟೀಕೆ ಟಿಪ್ಪಣಿ ಮಾಡಬಾರದು. ಇನ್ನೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಜನಪ್ರತಿನಿಧಿಗಳು ನಡೆದುಕೊಳ್ಳಬೇಕು. ಮೌಲ್ಯಾಧಾರಿತ ರಾಜಕಾರಣ ಮಾಡಬೇಕಾದುದ್ದು ಪ್ರತಿಯೊಬ್ಬ ಜನ ಪ್ರತಿನಿಧಿಯ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಿವಿಮಾತು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು, ನಾನು ರಾಮಕೃಷ್ಣ ಹೆಗಡೆಯವರ ಕಾಲದಿಂದಲೂ ರಾಜಕೀಯದಲ್ಲಿ ಇದ್ದೇನೆ. ಅಂದಿನಿಂದಲೂ ಮೌಲ್ಯಾಧಾರಿತ ರಾಜಕೀಯಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದೇನೆ. ಈಗ ನಾನು ಹೋಗುವಾಗ ಮಾಸ್ಕ್ ಹಾಕಿಕೊಳ್ಳದಿದ್ದರೆ, ಜನರು ನಮ್ಮಗೆ ಇವರು ಬುದ್ದಿ ಹೇಳುತ್ತಾರೆ ಆದರೆ ಅವರೇ ತಪ್ಪು ಮಾಡಿತ್ತಾರೆ ಎನ್ನುತ್ತಾರೆ. ಹಾಗಾಗಿ ನಾವು ಜನಪ್ರತಿನಿಧಿಗಳಾದವರು ಇನ್ನೊಬ್ಬರಿಗೆ ಮಾದರಿ ಆಗುವ ಹಾಗೇ ನಡೆದುಕೊಳ್ಳಬೇಕು ಎಂದರು.
ಇವತ್ತಿನ ರಾಜಕಾರಣದಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದನ್ನು ಸರಿ ಮಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸರ್ಕಾರದಲ್ಲಿ ಒಬ್ಬರು ಮಂತ್ರಿಯಾಗಿರುವವರು ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕು. ಸಾಮನ್ಯರು ಮಾತನಾಡುವುದು, ಹಾಗೇ ಒಬ್ಬರು ಮಂತ್ರಿ ಮಾತನಾಡುವುದು ತುಂಬಾ ವ್ಯತ್ಯಾಸ ಇರುತ್ತದೆ ಇಂದು ಎಲ್ಲರೂ ನೋಡಿಕೊಂಡು ತಮ್ಮ ಹೇಳಿಕೆಗಳನ್ನು ನೀಡಬೇಕಾಗಿದೆ ಎಂದು ತಿಳಿಸಿದರು.