Latest

Ayudha Pooja: ಅರಮನೆಯಲ್ಲಿ ಆಯುಧಪೂಜೆ ವಿಶೇಷ ಆಚರಣೆ

ಮೈಸೂರು : ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಜೋರಾಗಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧಗಳಿಗೆ ಪೂಜೆ ಸಲ್ಲಿಸಿದರು.

ಮುಂಜಾನೆ 5.30ರಿಂದಲೇ ಪೂಜಾ ಕೈಂಕರ್ಯಗಳು ನೆರವೇರಿತು.ನಂತರ 7.45ರ ಸುಮಾರಿಗೆ ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ಅರಮನೆಯ ಆನೆ, ಕುದುರೆ, ಹಸು, ಪಟ್ಟದ ಕತ್ತಿ ಪಲ್ಲಕ್ಕಿ ಸೇರಿದಂತೆ ರಾಜರು ಬಳಸುತ್ತಿದ್ದ ಆಯುಧಗಳಿಗೆ ಪೂಜೆ ಸಲ್ಲಿಸಲಿಲಾಯಿತು.

ಪೂರ್ಣಕುಂಭ ಹೊತ್ತ ಮಹಿಳೆಯರು ಜೊತೆಗೆ ರಾಜಪರಿವಾರದವರು ಭಾಗಿಯಾಗಿರುವ ಮೆರವಣಿಗೆ ಸೋಮೇಶ್ವರ ದೇಗುಲ ತಲುಪಿತು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ಮೆರವಣಿಗೆ ಆಗಮಿಸಿತು. ಬೆಳಿಗ್ಗೆ 11.02 ರಿಂದ 11.22ರ ಮುಹೂರ್ತದಲ್ಲಿ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಆಯುಧಪೂಜೆ ಪೂಜೆಯನ್ನು ನೆರವೇರಿಸಿದರು.

ತಮ್ಮ ಪೂರ್ವವಜರು ಬಳಸುತ್ತಿದ್ದ ಕತ್ತಿ, ಗುರಾಣಿ ಈಟಿ ಸೇರಿದಂತೆ ರಾಜಮನೆತನದ ಆಯುಧಗಳಿಗೆ ಪೂಜೆ ಸಲ್ಲಿಸಿದರು.‌ ಯದುವೀರ್ ಒಡೆಯರ್‌ ಪೂಜೆ ನಂತರ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಟ್ಟದ ಕತ್ತಿ, ಪಲ್ಲಕ್ಕಿ ತಂದು ಪೂಜೆ ನೆರವೇರಿಸುತ್ತಾರೆ. ಕೋಡಿ ಸೋಮೇಶ್ವರ ದೇವಾಲಯದಲ್ಲಿ ಯದುವಂಶ ಪ್ರಾರಂಭವಾಗಿದ್ದು, ಈ ಕಾರಣದಿಂದಲೇ ಅಲ್ಲೆ ಮೊದಲ ಪೂಜೆ ಹಾಗೂ ಕೊನೆ ಪೂಜೆ ನೆರವೇರಿಸಲಾಗುತ್ತದೆ. ದಸರಾ ಮಹೋತ್ಸವಕ್ಕಾಗಿ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿರುವ ಗಜಪಡೆಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದು ಅರಮನೆಯಲ್ಲಿ ಬಹಳ ವಿಶೇಷ ಪೂಜಾಕೈಂಕರ್ಯಗಳು ನೆರವೇರಲಿವೆ.

Related Articles

Leave a Reply

Your email address will not be published.

Back to top button