Latest
ʼಹೊಡೆದೋಡಿಸಿʼ ಎಂಬ ಘೋಷಣೆಯೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರೋಧಿ ರಣತಂತ್ರ!
ವಾರಾಣಸಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯ ಪ್ರಮುಖ ಅಸ್ತ್ರ ಎನಿಸಿದ್ದ ʼಖೇಲಾ ಹೋಬೆʼ ಘೋಷಣೆಯಿಂದ ಸ್ಫೂರ್ತಿ ಪಡೆದು ಸಮಾಜವಾದಿ ಪಕ್ಷ ಮತ್ತು ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದಿಂದ ʼಖದೇರಾ ಹೋಬೆ(ಹೊಡೆದೋಡಿಸಿ) ಎಂಬ ಘೋಷಣೆಯೊಂದಿಗೆ ಪೂರ್ವಾಂಚಲದಲ್ಲಿ ಬಿಜೆಪಿ ವಿರುದ್ಧ ಹೊಸದಾದ ರಣತಂತ್ರ ಹೆಣೆಯತೊಡಗಿದೆ.
ಉತ್ತರ ಪ್ರದೇಶದ ಒಟ್ಟು 403 ಸದಸ್ಯ ಬಲಗಳ ಪೈಕಿ 156 ಸದಸ್ಯರು ಆರಿಸಲ್ಪಡುವ ಪೂರ್ವಾಂಚಲ ಪ್ರದೇಶದಲ್ಲಿ ಕೇಸರಿ ಪಾಳೆಯ ಕಳೆದ 2017ರಲ್ಲಿ ಹೊಂದಿದ್ದ ಸ್ಥಿತಿಯನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಗ್ಗಿಸಲು ಕೆಂಪು-ಹಳದಿ ಮೈತ್ರಿ ಖದೇರಾ ಹೋಬ್ ಘೋಷಣೆ ಹೊರಬಿದ್ದಿದೆ.
ವಾರಾಣಸಿ ಮತ್ತು ಬಲ್ಲಿಯಾ ಪ್ರದೇಶದ 30-40 ಸ್ಥಾನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಅತ್ಯಂತ ಹಿಂದುಳಿದ ವರ್ಗವಾದ ರಾಜಭಾರ್ ಜಾತಿಯನ್ನು ಎಸ್ ಬಿಎಸ್ ಬಿ ಪ್ರತಿನಿಧಿಸುತ್ತದೆ.