Latest
ಸಂಗೀತದ ಧ್ವನಿ ತಗ್ಗಿಸುವಂತೆ ಹೇಳಿದ ಪೊಲೀಸರತ್ತ ಗುಂಡು ಹಾರಾಟ
ಗಯಾ: ಜೋರಾಗಿ ಮೊಳಗುತ್ತಿದ್ದ ಮ್ಯೂಸಿಕ್ ಧ್ವನಿಯನ್ನು ತಗ್ಗಿಸುವಂತೆ ಹೇಳಿದ ಪೊಲೀಸರತ್ತ ಕಲ್ಲೆಸೆದು, ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಬಿಹಾರದ ಗಯಾ ಸಮೀಪ ಶನಿವಾರ ರಾತ್ರಿ ನಡೆದಿದೆ.
ಗಯಾ ಪಟ್ಟಣದ ಥಾನಕುಪ್ಪ ಎಂಬಲ್ಲಿ ಲಕ್ಷ್ಮೀ ಪೂಜೆ ನಡೆಯುತ್ತಿದ್ದ ವೇಳೆ ನಡೆದ ಘರ್ಷಣೆ ನಡೆದಿದೆ. ಮೂರ್ತಿ ವಿಸರ್ಜನಾ ಮಹೋತ್ಸವದ ವೇಳೆ ಜೋರಾಗಿ ಕೇಳಿಬರುತ್ತಿದ್ದ ಮ್ಯೂಸಿಕ್ ಧ್ವನಿಯನ್ನು ತಗ್ಗಿಸುವಂತೆ ಪೊಲೀಸರು ಸಂಘಟಕರಿಗೆ ಸೂಚಿಸಿದ್ದೇ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.
ಪಿಎಸ್ಐ ಅಜಯ್ ಕುಮಾರ್ ಅವರ ಎಡಗಾಲಿಗೆ ಗುಂಡೇಟು ತಗುಲಿದೆ. ಸಶಸ್ತ್ರ ಪೊಲೀಸ್ ಪಡೆಯ ಇಬ್ಬರು ಜವಾನರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ. ಆರೋಪಿಗಳನ್ನು ಗುರುತಿಸಲಾಗಿದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಂದು ಗಯಾ ವಿಶೇಷ ಎಸ್ಪಿ ಆದಿತ್ಯ ಕುಮಾರ್ ತಿಳಿಸಿದ್ದಾರೆ.