Latest

ನಕಲಿ ಬಾಬಾ ನೇತೃತ್ವದ ಸರ್ಕಾರವನ್ನು ಜನ ಕಿತ್ತೊಗೆಯಲಿದ್ದಾರೆ: ಅಖಿಲೇಶ್ ಯಾದವ್

ಲಕ್ನೋ : ನಕಲಿ ಬಾಬಾ ನೇತೃತ್ವದ ರೈತ ವಿರೋಧಿಯಾಗಿರುವ ಬಿಜೆಪಿ ಸರ್ಕಾರವನ್ನು ಜನತೆ ಕಿತ್ತೊಗೆಯಲಿದ್ದಾರೆ. ಶೀಘ್ರದಲ್ಲೇ ಆಡಳಿತ ಬದಲಾವಣೆಯಾಗಲಿದೆ ಎಂದು ಮಾಜಿ ಸಿಎಂ, ಸಮಾಜವಾದಿ ಪಾರ್ಟಿಯ ನಾಯಕ ಅಖಿಲೇಶ್ ಯಾದವ್ ಹರಿಹಾಯ್ದಿದ್ದಾರೆ.

ಮುಂಬರುವ ಚುನಾವಣೆ ಸಿದ್ಧತೆಯಾಗಿ ನಡೆಸಿರುವ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು, ಲಖೀಂಪುರದಲ್ಲಿ ಖೇರಿಯಲ್ಲಿ ನಡೆದಿರುವ ಕೃತ್ಯವನ್ನು ಖಂಡಿಸಿ, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಪ್ರತಿಭಟನಾನಿರತ ರೈತರ ಮೇಲೆ ವಾಹನ ಹರಿಸಿ ಕೊಂದಿದ್ದಾರೆ. ಜನವಿರೋಧಿ ನೀತಿಗಳನ್ನು ಜಾರಿಗೊಳಿಸಿದ್ದಲ್ಲದೆ, ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

Related Articles

Leave a Reply

Your email address will not be published.

Back to top button