Latest
ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ
ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಕೆಲ ಗ್ರಾಮದಲ್ಲಿ ಲಘು ಭೂಕಂಪನ ಅನುಭವವಾಗಿದೆ. ಚಿಂಚೋಳಿ ತಾಲೂಕಿನ ಗಡಿಕೇಶ್ವರ, ತೇಗಲತಿಪ್ಪಿ ಗ್ರಾಮಗಳು ಕಳೆದ ರಾತ್ರಿ ಒಂದು ಗಂಟೆ ಸಮಯದಲ್ಲಿ ಲಘು ಭೂ ಕಂಪನ ಅನುಭವಾಗಿದೆ.
ಆತಂಕದಿಂದ ಮನೆಯಿಂದ ಹೊರಬಂದ ಜನರು ಇಡಿ ರಾತ್ರಿ ಜಾಗರಣೆ ಮಾಡಿದ್ದಾರೆ. ಗಡಿಕೇಶ್ವರ ಗ್ರಾಮದಲ್ಲಿ ಅನೇಕ ತಿಂಗಳಿಂದ ಭೂಮಿಯಿಂದ ಬಾರಿ ಸದ್ದು ಬರ್ತಿದೆ.
ಈ ಮೊದಲೇ ಸದ್ದಿನಿಂದ ಕಂಗಾಲಾಗಿರುವ ಗ್ರಾಮದ ಜನರು ಇದೀಗ ಲಘು ಭೂಕಂಪನದಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ