Latest

ನಟ ಪುನೀತ್​ಗೆ ಹೃದಯಾಘಾತ ಬೆನ್ನಲ್ಲೇ ಬೆಚ್ಚಿಬಿದ್ದ ಜನರು: ಹೃದಯ ಪರೀಕ್ಷೆಗೆ ಜಯದೇವ ಆಸ್ಪತ್ರೆಗೆ ದೌಡು

ಮೈಸೂರು: ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನ ಹಿನ್ನೆಲೆ ಯುವ ಜನರಲ್ಲಿ ಆತಂಕ ಹೆಚ್ಚಾಗಿದೆ. ಮೈಸೂರಿನ ಜಯದೇವ ಆಸ್ಪತ್ರೆಗೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳಲು ನೂರಾರು ಜನರು ದೌಡಾಯಿಸುತ್ತಿದ್ದಾರೆ.

ಆತಂಕದಲ್ಲಿ ಹೃದಯ ಪರೀಕ್ಷೆಗೆ ಜನಸಮೂಹ ಮುಂದಾಗಿದೆ, ಆಸ್ಪತ್ರೆ ವೈದ್ಯರು ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ್ರು ಪರೀಕ್ಷೆಗೆ ಮುಗಿಬಿದ್ದಿದ್ದಾರೆ. ಕಳೆದ ದಿನಗಳಿಗೆ ಹೋಲಿಸಿದ ಮೂರು ಪಟ್ಟು ಜನ ಹೆಚ್ಚಳವಾಗಿದೆ.

60 ಮಂದಿ ನೋಡುತ್ತಿದ್ದ ಜಾಗದಲ್ಲಿ 800 ಮಂದಿಯ ತಪಾಸಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಯಾರೂ ಕೂಡ ಆತಂಕ ಒಳಗಾಬೇಡಿ ಆ ರೀತಿ ಲಕ್ಷಣಗಳು ಕಂಡು ಬಂದರೆ ಮೊದಲು ತಕ್ಷಣದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳಿ. ಆ ವೈದ್ಯರು ರೆಫರ್ ಮಾಡಿದರೆ ಹೃದಯ ಸಂಬಂದಿತ ಆಸ್ಪತ್ರೆಗಳಿಗೆ ಭೇಟಿ ನೀಡಿ ಎಂದು ಜಯದೇವ ಆಸ್ಪತ್ರೆ ಅಧೀಕ್ಷಕ ಡಾ,ಸದಾನಂದ ಮಾಹಿತಿ ನೀಡಿದ್ದಾರೆ.

ಆತಂಕ ಪಟ್ಟು ಆಸ್ಪತ್ರೆ ಬರಬೇಡಿ, ಇದರಿಂದ ನಿಜವಾಗಿ ಹೃದಯ ಖಾಯಿಲೆ‌ ಇರುವವರಿಗೆ ಟ್ರೀಟ್ ಮಾಡಲು ತೊಂದರೆ ಆಗುತ್ತಿದೆ. ಸದ್ಯ ಬರುತ್ತಿರುವ ಶೇ 90 ರಷ್ಟು ಜನರಲ್ಲಿ ಯಾವುದೇ ಸಮಸ್ಯೆ ಇಲ್ಲ.
ಭಯ ಪಟ್ಟು ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅನುಮಾನಗಳಿದ್ದರೆ ಮೊದಲು ಹತ್ತಿರ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡ ಮಾತ್ರಕ್ಕೆ ಹೃದಯ ಖಾಯಿಲೆ ಇದೆ ಎಂಬ ಆತಂಕ ಬೇಡ. ನಿಯಮಿತ, ಸೀಮಿತ ವ್ಯಾಯಾಮ, ಉತ್ತಮ ಆಹಾರ ಕ್ರಮ ರೂಡಿಸಿಕೊಳ್ಳಿ ಯಾರು ಆತಂಕಪಡುವ ಅಗತ್ಯ ಇಲ್ಲ. ಅನಾವಶ್ಯಕವಾಗಿ ವೈದ್ಯರ ಮತ್ತು ಸಿಬ್ಬಂದಿಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಆತಂಕಪಡುವ ಅಗತ್ಯ ಇಲ್ಲ ಎಂದು ಡಾ. ಸದಾನಂದ ಹೇಳಿದರು.

Related Articles

Leave a Reply

Your email address will not be published.

Back to top button