Latest

Arbaz Murder Case: ಅರ್ಬಾಜ್ ಹತ್ಯೆ ಮಾಡಿದ್ದ ಪ್ರಮುಖ ಹತ್ತು ಜನರ ಬಂಧನ

ಬೆಳಗಾವಿ: ರಾಷ್ಟ್ರೀಯ ಸುದ್ದಿಯಾಗಿದ್ದ ಅರ್ಬಾಜ್ ಸಾವಿನ ಪ್ರಕರಣವನ್ನು ಕೊನೆಗೂ ಭೇದಿಸುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ, ಅರ್ಬಾಜ್ ತಾಯಿ ದೂರಿನ ಆದರದ ಮೇಲೆ ತನಿಖೆ ಕೈಗೆಟ್ಟಿಕೊಂಡಿದ್ದ ರೈಲ್ವೆ ಪೊಲೀಸರು ತದನಂತರ ಕೊಲೆ ಪ್ರಕರಣವನ್ನು ಖಾನಾಪುರ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು.

ಸದ್ಯ ಅರ್ಬಾಜ್ ಬಳಿ ಹಣ ಪಡೆದು ಹತ್ಯೆ ಮಾಡಿದ್ದ ಶ್ರೀರಾಮ ಸೇನೆ ಹಿಂದೂಸ್ತಾನ ಸಂಘಟನೆಯ ಪ್ರಮುಖ ಆರೋಪಿ ಒತ್ತೊಳ ಗ್ರಾಮದ ಪುಂಡಲೀಕ ಅಲಿಯಾಸ್ ಮಹಾರಾಜ್, ಸೇರಿದಂತೆ 10 ಜನರನ್ನು ಬಂಧಿಸಿ ಅರ್ಬಾಜ್ ಹತ್ಯೆ ಮಾಡಿದಕ್ಕೆ ಬಂಧಿಸಲಾಗಿದೆ

ಪ್ರಕರಣದಲ್ಲಿ ಪುಂಡಲೀಕ ಸೇರಿದಂತೆ ಅರ್ಬಾಜ ಪ್ರೀತಿಸುತ್ತಿದ್ದ ಯುವತಿ ತಾಯಿ ಸುಶೀಲಾ ಕಂಬಾರ,ರಾಜಿ ಸಂಧಾನಕ್ಕೆ ಕರೆಸಿದ್ದ ಖಾನಪುರದ ಕುತೂಬುದ್ದಿನ್ ಬೆಪಾರಿ,ಮಂಜುನಾಥ್ ಗೊಂದಲ, ಪ್ರಶಾಂತ್ ಪಾಟೀಲ್, ಪ್ರವೀಣ್ ಪೂಜಾರಿ, ಶ್ರೀಧರ ದೋಣಿ, ಗಣಪತಿ ಸುಗತಿ, ಇರಪ್ಪ ಬಸವಣ್ಣಿ ಕುಂಬಾರ, ಎನ್ನುವ ಆರೋಪಿಗಳನ್ನ ಸದ್ಯ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ತನಿಖೆಯನ್ನ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ, ಬೆಳಗಾವಿ ಐಜಿಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನ ಒಳಗೊಂಡ ತಂಡ ಆರೋಪಿತರನ್ನ ಪತ್ತೆ ಮಾಡಿದ್ದು ತನಿಖೆ ಮುಂದುವರೆಸಿದ್ದಾರೆ

Related Articles

Leave a Reply

Your email address will not be published.

Back to top button