Latest
Tiger: ಮರ ಹತ್ತಲು ಪ್ರಯತ್ನಿಸಿದ ಹುಲಿರಾಯ ; ಅರಣ್ಯದೊಳಗೆ ಸೆರೆಯಾದ ದೃಶ್ಯ!
ಚಿಕ್ಕಮಗಳೂರು: ಮರವೊಂದನ್ನು ಹತ್ತಲು ಪ್ರಯತ್ನಿಸುತ್ತಾ, ಪರದಾಡಿದ ಹುಲಿಯ ದೃಶ್ಯವೊಂದು ಅಭಯಾರಣ್ಯದಲ್ಲಿ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಸೆರೆಯಾಗಿರುವುದು ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಶತಾಯಗತಾಯ ಮರ ಹತ್ತಲೇಬೇಕು ಎಂದು ಹಠಕ್ಕೆ ಬಿದ್ದ ಹುಲಿರಾಯ, ಹೇಗಾದರೂ ಮಾಡಿ ಮರ ಹತ್ತುವ ವಿದ್ಯೆ ಕಲಿತು ಮರದಲ್ಲಿ ಸಿಗಬಹುದಾದ ಪ್ರಾಣಿಗಳನ್ನು ಹಿಡಿಯುವ ಮುಂದಾಲೋಚನೆ ಹೊಂದಿತ್ತೋ.. ಏನೋ!. ಎಷ್ಟೇ ಪ್ರಯತ್ನಿಸಿದರೂ, ಮರಳಿ, ಮರಳಿ ಯತ್ನ ಮಾಡಿದರೂ ಮರ ಹತ್ತಲು ಸಾಧ್ಯವಾಗದೆ ವ್ಯರ್ಥ ಪ್ರಯತ್ನವೆಂದು ಅರಿತ ಹುಲಿರಾಯ ಕೊನೆಗೆ ಉಸಿರುಬಿಡುತ್ತಾ ಹಿಂದಿರುಗಿ ಹೋಗಿದೆ.
ಇಂತಹ ಅಪರೂಪದ ವಿಡಿಯೋ ಅಭಯಾರಣ್ಯದಲ್ಲಿ ಪ್ರವಾಸಿಗರ ಕ್ಯಾಮರಕ್ಕೆ ಸೆರೆ ಸಿಕ್ಕಿದ್ದು, ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ ಸೆರೆಯಾದ ದೃಶ್ಯವೆಂಬ ಗಾಳಿಸುದ್ದಿ ವೈರಲ್ ಆಗುತ್ತಿದೆ. ಆದರೆ ಇದೊಂದು ಹಳೆಯ ದೃಶ್ಯವಾಗಿದ್ದು, ಮಧ್ಯಪ್ರದೇಶದ್ದು ಎಂದು ಪರಿಸರವಾದಿಗಳು ಸ್ಪಷ್ಟಪಡಿಸಿದ್ದಾರೆ.