Latest
ಅಫ್ಘಾನಿಸ್ತಾನ; ಮಾನವ ಹಕ್ಕು ಹೋರಾಟಗಾರ್ತಿ ಸಹಿತ ನಾಲ್ವರು ಮಹಿಳೆಯರ ಹತ್ಯೆ
ಕಾಬೂಲ್: ಅಫ್ಘಾನಿನ ಮಝಾರೆ ಶರೀಫ್ ನಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ಸಹಿತ ನಾಲ್ವರು ಮಹಿಳೆಯರ ಹತ್ಯೆಯಾಗಿರುವುದು ವರದಿಯಾಗಿದೆ.
ನಗರದ ಮನೆಯೊಂದರಲ್ಲಿ ಮಹಿಳೆಯರ ಮೃತದೇಹಗಳು ಪತ್ತೆಯಾಗಿದ್ದವು. ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ನಾಲ್ವರು ಮಹಿಳೆಯರನ್ನು ಮನೆಗೆ ಕರೆಸಿಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣವನ್ನು ನ್ಯಾಯಾಲಯದ ವಿಚಾರಣೆಗೆ ಒಪ್ಪಿಸಲಾಗುವುದು ಎಂದು ತಾಲಿಬಾನ್ ಆಂತರಿಕ ಸಚಿವಾಲಯದ ವಕ್ತಾರ ಖ್ವಾರಿ ಸಯ್ಯದ್ ಖೋಸ್ತಿ ತಿಳಿಸಿದ್ದಾರೆ.
ಮೃತರ ಹೆಸರು ಬಹಿರಂಗಪಡಿಸಲಾಗಿಲ್ಲ. ಒರ್ವ ಮಹಿಳೆ ಮಾನವಹಕ್ಕು ಹೋರಾಟಗಾರ್ತಿ ಹಾಗೂ ವಿವಿ ಉಪನ್ಯಾಸಕಿ ಫಿರೋಝಾನ್ ಸಾಫಿ ಎಂದು ಮಝಾರೆ ಶರೀಫಲ್ಲಿರುವ ಅಂತರಾಷ್ಟ್ರೀಯ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯೊಬ್ಬರು ಹೇಳಿರುವುದು ತಿಳಿದು ಬಂದಿದೆ.