ರಾಜ್ಯಾದ್ಯಂತ 3.27 ಲಕ್ಷ ಮನೆಗಳ ಹಂಚಿಕೆ ಮಾಡಬೇಕಾಗಿದೆ: ಸಚಿವ ವಿ ಸೋಮಣ್ಣ
ಧಾರವಾಡ: ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಂದ ಮೇಲೆ ಕ್ರಾಂತಿಕಾರಿ ತೀರ್ಮಾಗಳನ್ನು ಕೈಗೊಂಡಿದ್ದೇವೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಇಡೀ ರಾಜ್ಯದಲ್ಲಿಯೇ 3 ಲಕ್ಷ 27 ಸಾವಿರ ಮನೆಗಳ ಹಂಚಿಕೆ ಮಾಡಬೇಕಾಗಿದೆ. ಒಟ್ಟು 8 ಸಾವಿರ 600 ಎಕರೆಗೂ ಮೇಲ್ಪಟ್ಟ ಜಾಗದ ಹಕ್ಕನ್ನು ನಾವು ಕೊಡೋಕೆ ಕ್ರಾಂತಿಕಾರಿ ತೀರ್ಮಾನ ಮಾಡಿದ್ದೇವೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜ್ಯಧಾನಿಯಲ್ಲಿಒಂದು ಅಡಿ ಜಗ ಪಡೆಯಬೇಕುಬಾಂದ್ರೆ ದುಬಾರಿ ಬೆಲೆ ನೀಡಬೇಕಾಗಿದೆ. ಧಾರವಾಡದ ಕೊಳಚೆ ಅಭಿವೃದ್ಧಿ ಮಂಡಳಿಯ ಮನೆಗಳ ಹಂಚಿಕೆ ವಿಚಾರವಾಗಿ ಈಗಾಗಲೇ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗೂ ಶಾಸಕ ಅರವಿಂದ ಬೆಲ್ಲದವರೊಂದಿಗೆ ಚರ್ಚೆ ನಡೆಸಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೂ 3 ರಿಂದ 4 ತಿಂಗಳಲ್ಲಿ ಎಲ್ಲ ಮನೆಗಳ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಬಡವರಿಗೆ ಸೂರು ಕೊಡಿ, ಮೂಲಭೂತ ಸೌಕರ್ಯ ಕೊಡಿ ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ನಾವು ಕೆಲಸವನ್ನು ಮಾಡುತ್ತಿದ್ದೇವೆ. ಬಡವರ ಬಗ್ಗೆ ಕಾಳಜಿ ಹೊಂದಿರುವಂತಹ ಯಾರಾದರೂ ಒಬ್ಬ ಮಹಾನಾಯಕ ಇದ್ದಾರೆ ಅಂದರೆ ಅದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ. 75 ವರ್ಷದ ಬಳಿಕ ಬಡವರ ಬಗ್ಗೆ ಗಮನ ಹರಿಸಿದ ಪಕ್ಷ ಯಾವುದಾದರೂ ಇದ್ದರೆ ಅದು ಪಕ್ಷವಾಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರಗಳು ಸದಾ ಬಡವರ ಪರ ಕಾಳಜಿ ಹೊಂದಿವೆ. ಸಿದ್ದರಾಮಯ್ಯನವರ ಅಹಿಂದ ಹೋರಾಟವನ್ನಾದರೂ ಮಾಡಲಿ, ಬೇರೆ ಯಾರಾದರೂ ಏನಾದರೂ ಮಾಡಲಿ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರವರ ಅಹಿಂದ ನಡೆಯ ವಿರುದ್ಧ ಕುಟುಕಿದರು.
ಸಿದ್ದರಾಮಯ್ಯವರು ತಮ್ಮ ಹೇಳಿಕೆಗಳಿಗೆ ತಾವೇ ಹಿಡಿತ ಸೃಷ್ಟಿಸಿಕೊಳ್ಳುತ್ತಾರೆ.
ಸಿದ್ದರಾಮಯ್ಯರವರ ಬಿಜೆಪಿ – ಆರ್ಎಸ್ಎಸ್ನ್ನು ತಾಲಿಬಾನ್ ಹೋಲಿಕೆ ವಿಚಾರಬಾಗಿ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಚರ್ಚೆ ಆಗಿದೆ, ಅವರಿಗೂ ಸಹ ಇದು ಮನವರಿಕೆ ಆಗಿದೆ. ಮುಂದೆ ಸಿದ್ದರಾಮಯ್ಯ ಮಾತನಾಡುವಾಗ ತಮ್ಮ ಹಿಡಿತವನ್ನು ತಾವೇ ಸೃಷ್ಟಿ ಮಾಡಿಕೊಳ್ಳುತ್ತಾರೆ ಎಂದರು.
ಮತಾಂತರಿಗಳ ವಿರುದ್ಧ ಸರ್ಕಾರ ದಿಟ್ಟ ಕ್ರಮ
ಮತಾಂತರ ಕಾಯ್ದೆ ಕುರಿತು ಗೃಹ ಸಚಿವರು ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದಾರೆ. ಕಾಯ್ದೆ ತರುವ ಮೊದಲೇ, ಯಾರು ಈ ರೀತಿಯಾಗಿ ಯೋಚನೆ ಮಾಡುತ್ತಾರೆ ಹಾಗೂ ಅವರು ಚಿಂತನೆ ಮಾಡಬೇಕು. ಬಡವರ ಜೀವನಕ್ಕೆ ಕಲ್ಲಾಗಬಾರದು ತಿಳಿದುಕೊಳ್ಳಬೇಕು. ಬಡವನು ಸಹ ಬದುಕುವುದಕ್ಕೆ ಅವಕಾಶ ಇದೆ. ಅಂತವರಿಗೆ ತಲೆ ಕೆಡಿಸಿ ಬೇರೆ ಬೇರೆ ರೂಪ ಮಾಡಿ ಅವರ ನೆಮ್ಮದಿ ಹಾಳು ಮಾಡುವುದು ಒಳ್ಳೆಯದಲ್ಲ, ಇದನ್ನು ಸರ್ಕಾರ ಗಮನಿಸಿ ಒಂದು ದಿಟ್ಟ ನಿರ್ಧಾರವನ್ನು ನಮ್ಮ ಸರ್ಕಾರ ತೆಗದುಕೊಳ್ಳುತ್ತದೆ ಎಂದು ತಿಳಿಸಿದರು.